ಸುದ್ದಿ ಸುಳ್ಯ ಹಬ್ಬದ ಅಂಗವಾಗಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನ

0

ಸುಳ್ಯಕ್ಕೆ 60 – ಸುದ್ದಿಗೆ 40 ಸುಳ್ಯ ಹಬ್ಬದ ಅಂಗವಾಗಿ ಆಯೋಜನೆಗೊಳ್ಳುವ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಗ್ರಾಮ ಸಮಿತಿಗಳ ರಚನೆಗೆ ಚಾಲನೆ ನೀಡಲಾಗಿದ್ದು, ಪೂರ್ವಭಾವಿಯಾಗಿ ಅರಂತೋಡು ಗ್ರಾ.ಪಂ. ಸಭಾಭವನದಲ್ಲಿ ಫೆ. 18 ರಂದು ಸಭೆ ನಡೆಯಿತು.

ಸಭೆಯಲ್ಲಿ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ಸಮೃದ್ಧಿ ಮಾರ್ಟ್ ಅಧ್ಯಕ್ಷ ದಯಾನಂದ ಕುರುಂಜಿ, ಅರಂತೋಡು ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಗೋಪಾಲಕೃಷ್ಣ ಬನ, ಧರ್ಮಸ್ಥಳ ಗ್ರಾ. ಯೋಜನೆಯ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ, ಸುದ್ದಿ ಪ್ರತಿನಿಧಿ ಅಶ್ರಫ್ ಗುಂಡಿ, ಅಂಚೆ ವಿತರಕ ಸುಧಾಕರ ಅರಂತೋಡು, ಗ್ರಾಮ ಒನ್ ಕೇಂದ್ರದ ಮಂಜುನಾಥ ಪೈ, ಸುದ್ದಿ ಪತ್ರಿಕಾ ವಿತರಕಿ ನಾಗವೇಣಿ ಸೇರಿದಂತೆ ಸುದ್ದಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿದ್ದವರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಮುಂದೆ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸೇರಿ ಸಭೆ ನಡೆಸುವುದೆಂದು ತೀರ್ಮಾನಿಸಲಾಯಿತು.