ಜಯನ್ ಅಡ್ಕಾರು ನಿಧನ

0

ಜಾಲ್ಸೂರು ಗ್ರಾಮದ ಅಡ್ಕಾರು ನಿವಾಸಿ ಜಯನ್ ಅವರು ಬ್ರೈನ್ ಹೆಮರೇಜ್ ನಿಂದಾಗಿ ಫೆ.18ರಂದು ಸಂಜೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅಡ್ಕಾರಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ವಿತರಕರಾಗಿದ್ದ ಜಯನ್ ಅವರು ಫೆ.14ರಂದು ಬೆಳಿಗ್ಗೆ ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ವೈದ್ಯರ ಸಲಹೆಯಂತೆ ಫೆ.18ರಂದು ಮಧ್ಯಾಹ್ನ ಸುಳ್ಯದ ಕೆವಿಜಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ತರಲಾಗಿತ್ತು. ಅಲ್ಲಿ ಅವರು ಸಂಜೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ನಿವೃತ್ತ ಶಿಕ್ಷಕಿ ಅಮ್ಮಣ್ಣಿ, ಮೂವರು ಪುತ್ರಿಯರಾದ ಶ್ರೀಮತಿ ಸುಧ, ಶ್ರೀಮತಿ ಸಿಂಧೂ, ಶ್ರೀಮತಿ ಬಿಂದು , ಸಹೋದರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ರತ್ಮಾವತಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.