ಅರಂತೋಡು : ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸ್ಥಾಪನಾ ದಿನಾಚರಣೆ

0


ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ಫೆ. 19 ರಂದು ಸ್ಥಾಪನಾ ದಿನವನ್ನು ಆಚರಿಸಲಾಯಿತು. ದ್ವಜಾರೊಹಣವನ್ನು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರ‍್ರಫ್ ಗುಂಡಿ ನೆರವೇರಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿ ಸಂದೇಶ ಭಾಷಣ ಮಾಡಿದರು.

ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ನ ಅಧ್ಯಕ್ಷ ಜುಬೈರ್ ಎಸ್.ಇ ವಹಿಸಿದರು. ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಜೊತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ಎ.ಹೆಚ್.ವೈ.ಎ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಸದರ್ ನೌಶಾದ್ ಅಝ್ಹರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಮುಜೀಬ್, ಹನೀಫ್ ಕುನ್ನಿಲ್, ಮುಝಮ್ಮಿಲ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್ ಸ್ವಾಗತಿಸಿದರು. ತಾಜುದ್ಧೀನ್ ಅರಂತೋಡು ವಂದಿಸಿ ಕಾರ್ಯಕ್ರಮ ನಿರೂಪಿಸಿದರು