ಸ್ವರ್ಣ ಮಹಿಳಾ ಮಂಡಲ (ರಿ ) ಕನಕಮಜಲು ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವು ಶ್ರೀ ಆತ್ಮ ರಾಮ ಭಜನಾಮಂದಿರದ ಸಭಾಭವನದಲ್ಲಿ ನೆರವೇರಿತು.
ವಾರ್ಷಿಕ ಮಹಾ ಸಭೆಯಲ್ಲಿ ಶ್ರೀಮತಿ ಕುಸುಮ ಅಡ್ಕಾರ್ ಇವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶ್ಯಾಮಲಾ ಪೆರುಂಬಾರು ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಗೂ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಮಂಡಲದ ನೂತನ ಅಧ್ಯಕ್ಷರಾಗಿ ಶ್ರೀಮತಿ ವಾರಿಜಾ ದಾಮೋದರ ಕೋಡ್ತಿಲು, ಕಾರ್ಯದರ್ಶಿಯಾಗಿ ಶ್ರೀಮತಿ ಶಾರದಾ ಉಗ್ಗ ಮೂಲೆ, ಉಪಾಧ್ಯಕ್ಷರಾಗಿ ಶ್ರೀಮತಿ ಪ್ರೇಮ ಅಡ್ಕಾರ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಅಖಿಲ ರವಿಪ್ರಕಾಶ್ ಬೊಮ್ಮಟ್ಟಿ ಇವರು ಆಯ್ಕೆಯಾದರು.
ಶ್ರೀಮತಿ ಸುಮತಿ ಕುತ್ಯಾಳ, ಶ್ರೀಮತಿ ರೇಖಾ ಅಡ್ಕಾರ್, ಶ್ರೀಮತಿ ಪ್ರೇಮ ಪಲ್ಲತಡ್ಕ, ಶ್ರೀಮತಿ ಕವಿತಾ ಪೆರುಂಬಾರು, ಶ್ರೀಮತಿ ಶ್ಯಾಮಲ ಪೆರುಂಬಾರು ಶ್ರೀಮತಿ ಗೀತಾ ಅಡ್ಕಾರ್, ಶ್ರೀಮತಿ ನಳಿನಾಕ್ಷಿ ಪಲ್ಲತಡ್ಕ, ಶ್ರೀಮತಿ ಪದ್ಮಾವತಿ ಬುಡ್ಲೆಗುತ್ತು ಇವರುಗಳು ಪದಾಧಿಕಾರಿಗಳಾಗಿ ಆಯ್ಕೆಗೊಂಡರು.
ಪದಗ್ರಹಣದ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಶಾರದಾ ಉಗ್ಗಮೂಲೆ, ಅಧ್ಯಕ್ಷರು ಗ್ರಾಮ ಪಂಚಾಯತ್ ಕನಕ ಮಜಲು ಇವರು ವಹಿಸಿದ್ದರು, ಶ್ರೀಮತಿ ಕುಸುಮಾವತಿ ಪಿ ನಿವೃತ್ತ ಶಿಕ್ಷಕಿ ಇವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀಮತಿ ಪ್ರೇಮ ಅಡ್ಕಾರ್ ಸ್ವಾಗತಿಸಿದರು. ಶ್ರೀಮತಿ ಗೀತಾ ಅಡ್ಕಾರ್ ಪ್ರಾರ್ಥಿಸಿದರು. ಹಾಗೂ ಶ್ರೀಮತಿ ಶಾಮಲಾ ಪೆರುಂಬಾರು ವಂದಿಸಿದರು.