ಅರಂತೋಡು ಗ್ರಾಮ ಸಭೆ

0

ಗ್ರಾಮ ಸಭೆಗೆ ಇಲಾಖಾಧಿಕಾರಿಗಳ ಗೈರು : ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯ

ಆರಂತೋಡು ಗ್ರಾಮ ಪಂಚಾಯಿತಿನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಆರಂತೋಡು ಗ್ರಾಮ ಪಂಚಾಯತ್ ನ “ಅಮೃತ ಸಭಾಂಗಣ”ದಲ್ಲಿ ಫೆ.17ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡಲ್ ಅಧಿಕಾರಿಗಳಾಗಿ ಶ್ರೀಮತಿ ಗೀತಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಸುಳ್ಯ ಭಾಗವಹಿಸಿದರು.

ತೊಡಿಕಾನ ಗ್ರಾಮಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ, ಪೋಲೀಸ್ ಇಲಾಖೆ ಯ ಅಧಿಕಾರಿಗಳು ಗೈರು ಹಾಜರಿಯ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚರ್ಚೆ ನಡೆದು ಸಭೆಯ ಅಭಿಪ್ರಾಯದಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಜಿಲ್ಲೆಯ ಇಲಾಖಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ವಿಶ್ರಾಂತ ಪ್ರಾಂಶುಪಾಲರಾದ. ಕೆ ಆರ್ ಗಂಗಾಧರ್ ಮಾತನಾಡಿ ಬೆಳೆಯುತ್ತಿರುವ ಅರಂತೋಡು ಪೇಟೆಯನ್ನು ಸುಂದರಗೊಳಿಸುವ ರಸ್ತೆಯ ಎರಡು ಬದಿ ಸ್ವಚ್ಛಗೊಳಿಸಿ ನೆರಳು ನೀಡುವ ಮರಗಳನ್ನು ನೇಡುವ ಬಗ್ಗೆ ಹಾಗೂ ಕುಲ್ಚಾರ್ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಅಡ್ಯಡ್ಕ ಮಾತನಾಡಿ ಅಡ್ಯಡ್ಕದಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ಆರೋಗ್ಯ ಕೇಂದ್ರದ ಜಾಗದ ಸಮಸ್ಯೆಯನ್ನು ಪರಿಹರಿಸಿ ಆರೋಗ್ಯ ಕೇಂದ್ರದ ಉಪ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿದರು.

ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ರಫ್ ಗುಂಡಿ ಆರಂತೋಡು ಸಮುದಾಯ ಆಸ್ಪತ್ರೆ ಮತ್ತು ಅರಂತೋಡು ಪಶು ಚಿಕಿತ್ಸಾಲಯಕ್ಕೆ ಶಾಶ್ವತ ವೈದ್ಯಾಧಿಕಾರಿಗಳ ನೇಮಕಕ್ಕೆ ಆಗ್ರಹಿಸಿ ಆರಂತೋಡು ಅಂಚೆ ಕಚೇರಿಯಲ್ಲಿ ಆದಾರ್ ಸೇವಾ ಕೇಂದ್ರವನ್ನು ಮರು ಆರಂಭಿಸಲು ಆಗ್ರಹಿಸಿದರು.

ಸುಂದರ ಬಾಜಿನಡ್ಕ ಸ್ವಸಹಾಯ ಸಂಘಗಳ ಸಭೆಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲು ಅನುಮತಿ ಕೋರಿದರು.

ಗ್ರಾಮ ಸಭೆಯಲ್ಲಿ ರಸ್ತೆ, ನರೇಗಾ, ಕುಡಿಯುವ ನೀರಿನ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸರಕಾರದ ವಿವಿಧ ಸವಲತ್ತುಗಳು ಮತ್ತು ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಹರಿಣಿ ದೇರಾಜೆ, ಶ್ವೇತಾ ಅರಮನೆ ಗಾಯ, ಮಾಲಿನಿ ಉಳುವಾರು, ಸರಸ್ವತಿ ಬಿಳಿಯಾರು, ಸುಜಯ ಮೇಲೆ ಅಡ್ತಲೆ, ಉಷಾ ಅಡ್ಯಡ್ಕ, ವಿನೋದ ತೊಡಿಕಾನ, ಶಿವಾನಂದ ಕುಕ್ಕುಂಬಳ, ವೆಂಕಟ್ರಮಣ ಪೆತ್ತಾಜೆ, ಪುಷ್ಪಾದರ ಕೊಡಂಕೇರಿ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲ ಬನ, ಇಲಖಾಧಿಕಾರಿಗಳು, ಮತ್ತು ಹೆಚ್ಚಿನ ಸಂಖ್ಯೆ ಗ್ರಾಮಸ್ಥರು ಭಾಗವಸಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಈಶ್ವರ್ ಗ್ರಾಮ ಸಭೆಯ ವರದಿ ವಾಚಿಸಿದರು.
ಉಪಾಧ್ಯಕ್ಷರಾದ ಭವಾನಿ. ಸಿ. ಎ. ಧನ್ಯವಾದ ಸಮರ್ಪಿಸಿದರು. ಗ್ರಾಮ ಸಭೆಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.