ಕುಡಿಯುವ ನೀರಿಗೂ ತೊಂದರೆ
ಇಂದು ಸರಿಯಾಗಬಹುದು : ಮೆಸ್ಕಾಂ
ಗುತ್ತಿಗಾರು ಭಾಗಕ್ಕೆ ಕಳೆದ ಮೂರು ದಿನಗಳಿಂದ ತ್ರೀ ಫೇಸ್ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮ ಪಂಚಾಯತ್ , ಸಾರ್ವಜನಿಕರು ಕೃಷಿಕರು ಕಂಗಾಲಾಗಿದ್ದು ಇಂದು ಸಂಜೆಯ ವೇಳೆಗೆ ತ್ರೀ ಫೇಸ್ ಸರಬರಾಜು ಆಗಬಹುದು ಎಂದು ಮೆಸಾಂ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ತ್ರೀಫೆಸ್ ಇಲ್ಲದಿರುವುದರಿಂದ ಗ್ರಾ.ಪಂ ಗೆ ಕುಡಿಯುವ ನೀರಿನ ಸರಬರಾಜು ಸಂಕಷ್ಟ ಉಂಟಾಗಿದೆ. ಕೃಷಿಕರಿಗೆ ಕೃಷಿಗೆ, ಗೃಹಪಯೋಗಕ್ಕೂ ನೀರಿನ ಕೊರತೆ ಉಂಟಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದಿಂದ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತಿದ್ದರೂ ಲೋ ವೋಲ್ಟೇಜ್ ಮತ್ತಿತರರ ಸಮಸ್ಯೆಗಳಿವೆ.
ಬೆಳ್ಳಾರೆಯಲ್ಲಿ ಮೂರು ಕಡೆ ೩೩ ಕೆ.ವಿ ಭೂಗತ ಕೇಬಲ್ ನಲ್ಲಿ ಫಾಲ್ಟ್ ಕಂಡು ಬಂದ ಕಾರಣ ವಿದ್ಯುತ್ ಸರಬರಾಜು ವ್ಯತ್ಯಯ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಮೆಸ್ಕಾಂ ಸಿಬ್ಬಂದಿಗಳು ಭೂಮಿ ಅಗೆದು ಫಾಲ್ಟ್ ಹುಡುಕಿ ಕೇಬಲ್ ಸರಿಪಡಿಸುತಿದ್ದಾರೆ. ತಡ ರಾತ್ರಿ ವರಗೆ ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ.
ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು ಇಂದು ಸಂಜೆಗಾಗುವಾಗ ಫಾಲ್ಟ್ ಬಂದ ಕಡೆ ರಿಪೇರಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಸಂಜೆ ಬಳಿಕ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.