ಎಸ್ ಕೆ ಎಸ್ ಎಸ್ ಎಫ್ ಸ್ಥಾಪನಾ ದಿನಾಚರಣೆಯನ್ನು ಪೇರಡ್ಕ ಮಸೀದಿ ವಠಾರದಲ್ಲಿ ಫೆ 19 ರಂದು ಆಚರಿಸಲಾಯಿತು.
ಜಮಾಅತ್ ಅದ್ಯಕ್ಷರಾದ ಟಿ ಎಂ ಶಹೀದ್ ಅವರು ದ್ವಜಾರೊಹಣ ನೆರವೇರಿಸಿದರು. ಸ್ಥಳೀಯ ಜಮಾಅತ್ ಖತೀಬರಾದ ನಈಂ ಫೈಝಿ ಉಸ್ತಾದರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಾರೈಸಿದರು.
ಜಮಾಅತ್ ಕಾರ್ಯದರ್ಶಿ ಪಿ ಕೆ ಉಮ್ಮರ್ ಉಪಾದ್ಯಕ್ಷರಾದ ಟಿ ಬಿ ಹನೀಫ್,ಶಾಖಾ ಅದ್ಯಕ್ಷರಾದ ಮುನೀರ್ ದಾರಿಮಿ,ಉಪಾದ್ಯಕ್ಷರಾದ ಸಾದುಮಾನ್ ತೆಕ್ಕಿಲ್, ಬಶೀರ್ ಬೆಳ್ಳಾರೆ, ಶಾಹಿಲ್ ದರ್ಕಾಸ್, ಮುಹಝ್ಝಿನ್ ಹಾರಿಸ್, ಅಝ್ಹರಿ ಮದರಸ ಮಕ್ಕಳು,ಜಮಾಅತ್ ಸದಸ್ಯರುಗಳು ಭಾಗವಹಿಸಿದ್ದರು.
ಅಬ್ದುಲ್ ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ ಮುನೀರ್ ವಂದಿಸಿದರು.