
ಆಲೆಟ್ಟಿ ಪಂಜಿಮಲೆಯಲ್ಲಿ ಮಾಮೂಲು ಪ್ರಕಾರ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಆಶ್ರಯದಲ್ಲಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ.18 ರಂದು ಕೂಡಿ 19 ರಂದು ಜರುಗಿತು.
ಬೆಳಗ್ಗೆ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.
ಸಂಜೆ ಗುಂಡ್ಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಭಂಡಾರ ತೆಗೆದು ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ದೈವದ ಭಂಡಾರವು ಒತ್ತೆಕೋಲ ಮಜಲಿಗೆ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ಬಳಿಕ ಶ್ರೀ ಸದಾಶಿವ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆದು ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಿತು.

ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆದು ಬಳಿಕ ಮಾರಿಕಳ ಪ್ರವೇಶವಾಗಿ ಪ್ರಸಾದ ವಿತರಣೆಯಾಯಿತು.
ಭಾರತೀಯ ತೀಯ ಸಮಾಜ ಬಾಂಧವರು ದೈವದ ಸೇವಾ ಕಾರ್ಯವನ್ನು ನಿರ್ವಹಿಸಿದರು.
ರಾತ್ರಿ ಆಗಮಿಸಿದ
ಎಲ್ಲಾ ಭಕ್ತಾದಿಗಳಿಗೆ ದೇವಳದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯಾಯಿತು.ಒತ್ತೆಕೋಲ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಊರಿನ ಮತ್ತು ಪರ ಊರಿನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗನಿಸಿ ಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ:
ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ 13 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಉದ್ಘಾಟಿಸಿದರು.
ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ, ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ಭಜನಾ ಸಂಘದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಆಲೆಟ್ಟಿ, ಭ.ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷರು ಗುತ್ತಿಗೆದಾರರಾದ ತೀರ್ಥಕುಮಾರ್ ಕುಂಚಡ್ಕ ರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕು.ದಿಶಾ ಆಲೆಟ್ಟಿ ಪ್ರಾರ್ಥಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಸುನಿಲ್ ಗುಂಡ್ಯ ಸ್ವಾಗತಿಸಿದರು. ನವೀನ್ ಬಾಂಜಿಕೋಡಿ, ರೂಪಾನಂದ ಗುಂಡ್ಯ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಾಳ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬೆಳ್ತಂಗಡಿ ಇವರಿಂದ ಮಾಯೊಕೊದ ಸತ್ಯ ಕಲ್ಲುರ್ಟಿ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಜನನಿ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.