ಸುಳ್ಯ ಶಾಖೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ
ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೊಂದಾಯಿಸಲಾಗಿರುವ ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ. ಸಂಸ್ಥೆಯು 4ನೇ ವರ್ಷದ ಸಂಭ್ರದಲ್ಲಿದೆ.

ಈ ಹಿನ್ನಲೆಯಲ್ಲಿ ಸುಳ್ಯದ ಶ್ರೀ ಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರು ಹಾಗೂ ಸ್ಥಾಪಕ ಸದಸ್ಯರಾದ ಆಲ್ವಿನ್ ಜೋಯಲ್ ನೊರೊನ್ಹಾ ಆಗಮಿಸಿ ಮಾತನಾಡಿ ನಮ್ಮ ಸಂಸ್ಥೆಯು ಫೆ.19- 2021ರಲ್ಲಿ ಪ್ರಾರಂಭಗೊ0ಡು ಇದೀಗ ನಾಲ್ಕು ವರ್ಷದ ಯಶಸ್ಸಿನ ಪಯಣದೊಂದಿಗೆ ಮುನ್ನುಗ್ಗಿ ಜನರ ನಂಬಿಕೆ ಪಾತ್ರವಾಗಿದೆ ಎಂದರು.

ವ್ಯವಸ್ಥಾಪಕ ಪಾಲುದಾರರು ಹಾಗೂ ಶಾಖಾಧ್ಯಕ್ಷ ವೆಂಕಟ್ರಮಣ ಮುಳ್ಯ, ಪಾಲದಾರರು ಹಾಗೂ ಶಾಖಾ ಕಾರ್ಯದರ್ಶಿ ಎಸ್.ಸತೀಶ್ ನಾಯಕ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪಾಲದಾರರು ಹಾಗೂ ಶಾಖಾ ಉಪಾಧ್ಯಕ್ಷ ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಬಿನ್ಸನ್ ಹಾಗು ರೀಜನಲ್ ಮ್ಯಾನೇಜರ್ ಜೋಯ್ಲಿನ್ ಥಾಮಸ್
ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಾಯಕ ಶಾಖಾ ವ್ಯವಸ್ಥಾಪಕರಾದ ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಶಾಖಾ ವ್ಯವಸ್ಥಾಪಕ ಅವಿನಾಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಂಸ್ಥೆಯಲ್ಲಿ ಪಿಗ್ಮಿ, ಭಾರತ್ ಬಚತ್ ದೈನಂದಿನ ಠೇವಣಿ ಯೋಜನೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ಪರ್ಸನಲ್ ಲೋನ್, ಬಿಸಿನೆಸ್ ಲೋನ್, ವಾಹನ ಸಾಲ, ಗೃಹ ಸಾಲ, ಗ್ರೂಪ್ ಆಕ್ಷನ್ ಲೋನ್ ಜನರ ಅನುಕೂಲಕ್ಕೆ ತಕ್ಕಂತೆ ಲಭ್ಯವಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.