ಬಾಳಿಲ ಗ್ರಾಮದ ಅಗಲ್ಪಾಡಿ ಎಂಬಲ್ಲಿ ಅಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಟೋದಲ್ಲಿದ್ದ ಶಾಲಾ ಮಕ್ಕಳು ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡ ಘಟನೆ ಇಂದು (ಮಾ. 10) ಬೆಳಿಗ್ಗೆ ನಡೆದಿದೆ.

ಅಟೋ ಬೆಳ್ಳಾರೆ ಕೆ.ಪಿ.ಎಸ್ ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿತ್ತು. ಕಾರು ಸುಳ್ಯದ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳದೆಂದು ತಿಳಿದುಬಂದಿದೆ. ಅಟೋದಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ.