ಗುತ್ತಿಗಾರು, ನಡುಗಲ್ಲಿನ ವಿದ್ಯಾರ್ಥಿಗಳ ಪರದಾಟ
ಸುಬ್ರಹ್ಮಣ್ಯಕ್ಕೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೆ ಪರೀಕ್ಷೆ ಸಮಯದಲ್ಲಿ ಮಕ್ಕಳು ಪರಿತಪಿಸುವಂತಾಗಿರುವುದಾಗಿ ವರದಿಯಾಗಿದೆ.
ಕಳೆದ ಹಲವು ಸಮಯದಿಂದ ಬೆಳಗ್ಗೆ 7.30 ಕ್ಕೆ ಸುಳ್ಯದಿಂದ ಹೊರಟು ಗುತ್ತಿಗಾರು, ನಡುಗಲ್ಲು, ಹಾಲೆಮಜಲು, ಮರಕತ, ಕಲ್ಲಾಜೆ ಆಗಿ ಸುಬ್ರಹ್ಮಣ್ಯಕ್ಕೆ ಹೋಗುವ ಸರ್ಕಾರಿ ಬಸ್ ಹೆಚ್ಚಿನ ದಿನ ಬರದಿದ್ದು ಶಾಲಾ ಮಕ್ಕಳು ಪರದಾಡುವ ಸ್ಥಿತಿ ಬಂದೊದಗಿದೆ.
ಅದೆಷ್ಟೋ ಮಕ್ಕಳ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಅಧಿಕಾರಿಗಳ ನ್ನು ಮಾತಾಡಿಸಿ ಕೂಡ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಈ ಬಗ್ಗೆ ಸ್ಥಳೀಯರು ಸೇರಿ ಕೆ.ಎಸ್.ಆರ್.ಟಿ ಸಿ ಮನವಿ ಅರ್ಪಿಸಿದ್ದಾರೆ ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗುತ್ತಿಗಾರು ಗ್ರಾ.ಪಂ ವಿಜಯ ಕುಮಾರ್ ಚಾರ್ಮತ ಹೇಳಿದ್ದಾರೆ.