ಮಾ.19 ಮತ್ತು 20ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ
ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20ರಂದು ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.
ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆಯವರು ಪ್ರಾರ್ಥನೆ ನೆರವೇರಿಸಿದ ಬಳಿಕ ಅವರ ತೋಟದಿಂದ ಮುಹೂರ್ತದ ಗೊನೆ ಕಡಿದು ದೈವಸ್ಥಾನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಕಜೆ, ಮಾಜಿ ಅಧ್ಯಕ್ಷರಾದ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಶೇಖರ ಕುದ್ಪಾಜೆ, ಗುಳಿಗಕಟ್ಟೆ ಸಮಿತಿ ಅಧ್ಯಕ್ಷರಾದ ನಾರಾಯಣ ಮಣಿಯಾಣಿ, ಯುವಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ್, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ರೈ ದುಗ್ಗಲಡ್ಕ, ಸಮಿತಿಗಳ ಪ್ರಮುಖರಾದ ದಿನೇಶ್ ಡಿ.ಕೆ.,ಶ್ರೀಧರ ಆಚಾರ್ಯ ಕೆದ್ಕಾನ, ಬಾಬು ಮಣಿಯಾಣಿ,ಶಿವಪ್ರಸಾದ್ ಕುದ್ಪಾಜೆ, ಗಿರೀಶ್ ಮೂಡೆಕಲ್ಲು, ಸೀತಾರಾಮ ಈಶ್ವರಡ್ಕ, ಮನು(ಧನಂಜಯ)ದುಗ್ಗಲಡ್ಕ, ಕೃಷ್ಣಪ್ಪ ಗೌಡ ಕೊಡೆಂಚಡ್ಕ, ಚಂದ್ರಶೇಖರ ಆಚಾರ್ಯ, ಶ್ರೀಧರ ರೈ,ದೇವಪ್ಪ ಆಚಾರ್ಯ ಕೆದ್ಕಾನ, ಗಂಗಾಧರ ಗೌಡ ದುಗ್ಗಲಡ್ಕ, ರೂಪೇಶ್ ನೀರಬಿದಿರೆ, ಸುಬ್ರಹ್ಮಣ್ಯ (ಮಣಿ) ಕುಂಬೆತ್ತಿಬನ, ಹರಿಪ್ರಸಾದ್ ರೈ, ನಾರಾಯಣ ಕಲಾಪ್ರಿಯ,ಸಂದೀಪ್ ರೈ, ಲೋಹಿತ್ ಮಾಣಿಬೆಟ್ಟು, ಮೋಹನ್ ಕೊಯಿಕುಳಿ, ಬಾಬು(ತಮ್ಮು) ದುಗ್ಗಲಡ್ಕ, ಚಿಂತನ್, ಗುರುವ ದುಗ್ಗಲಡ್ಕ, ಜಯರಾಮ ಕಲಾಪ್ರಿಯ, ಲಿಂಗೇಶ್ವರ ದುಗ್ಗಲಡ್ಕ, ರಮೇಶ್ ನೀರಬಿದಿರೆ ಹಾಗೂ ದೈವದ ಪೂಜಾರಿಗಳು, ಮತ್ತಿತರರು ಉಪಸ್ಥಿತರಿದ್ದರು.