ಆರ್ತಾಜೆ ಪರಿಸರದಲ್ಲಿ 6 ತಿಂಗಳಿನಿ೦ದ ನೀರಿಲ್ಲ: ಸಂಕಷ್ಟದಲ್ಲಿ ಜನರು

0

ಜಾಲ್ಸೂರು ಗ್ರಾಮದ ಆರ್ತಾಜೆ ಪರಿಸರದ ಸುತ್ತಲಿನ ಕೆಲ ಮನೆಗಳಿಗೆ ಕಳೆದ 6 ತಿಂಗಳಿನಿ0ದ ದೈನಂದಿನ ಕೆಲಸಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ.

ರಸ್ತೆ ಅಗಲೀಕರಣದ ವೇಳೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲ ಜೀವನ ಮಿಷನ್ (ಜೆಜೆಎಂ) ಇದರ ಪೈಪ್ ಲೈನ್‌ಗಳನ್ನು ತೆಗೆದು ಹಾಕಲಾಗಿದ್ದು ಬಳಿಕ ಮರುಜೋಡಣೆಯ ಕೆಲಸವಾಗಿದ್ದರು, ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ. ಇದರಿಂದ ಕೆಲ ಮನೆಗಳಿಗೆ ನೀರು ಇಲ್ಲದಾಗಿದೆ. ಇನ್ನು ಹೊಸಗದ್ದೆ ಭಾಗದಲ್ಲಿ ಕೆಲ ಮನೆಗಳಿಗೆ ನೀರು ಬಂದರು ಟ್ಯಾಂಕ್ ತುಂಬಲು 2 ದಿನ ಬೇಕಾಗುವ ಪರಿಸ್ಥಿತಿಯೂ ಬಂದೊದಗಿದೆ.

ಹಾಗಾಗಿ ಸ್ನಾನ, ಬಟ್ಟೆ, ಮನೆ ಸ್ವಚ್ಛತೆಗೆ, ಶೌಚಾಲಯ ಬಳಕೆ ಸೇರಿದಂತೆ ದಿನನಿತ್ಯದ ಬಳಕೆಗೆ ನೀರು ಸಿಗುವುದೇ ಇಲ್ಲ ಹಾಗಾಗಿ ಯಾರ ಬಳಿ ನಮ್ಮ ಗೋಳು ಹೇಳಿಕೊಳ್ಳುವುದು ಎಂದು ಸುದ್ದಿಗೆ ಸ್ಥಳೀಯರು ತಿಳಿಸಿದ್ದಾರೆ.

ಇನ್ನು ಈ ಕುರಿತು ಸ್ಥಳೀಯರು ಸಂಬ0ಧಪಟ್ಟ ಇಲಾಲೆ ಹಾಗೂ ಆಡಳಿತದ ಗಮನಕ್ಕೆ ತಂದಾಗ 2 ಕಡೆಯವರು ನಮ್ಮ ಸಮಸ್ಯೆಯಲ್ಲ ಎಂದು ಹೇಳುತ್ತಿದ್ದಾರೆ ಎಂದು ಸ್ಥಳೀಯರು ದೂರಿಕೊಂಡಿದ್ದು, ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹಾಗಾಗಿ ಸಂಬಂಧಪಟ್ಟ ಗ್ರಾಮ ಆಡಳಿತ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವರು ಈ ಕಡೆ ಆದಷ್ಟು ಬೇಗ ಗಮನಹರಿಸಿ ನೀರಿನ ಸಮಸ್ಯೆ ಸರಿಪಡಿಸಿ ಕೊಡಬೇಕಾಗಿದೆ.

ಈ ಭಾಗಕ್ಕೆ ಒಂದು ವಾರದೊಳಗೆ ನೀರಿನ ಸಮಸ್ಯೆ ಸರಿ ಮಾಡಿಕೊಡದಿದ್ದಲ್ಲಿ ಸ್ಥಳೀಯರು ಸೇರಿ ಪಂಚಾಯತ್ ಮುಂಬಾಗ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ.