ಹಳೆಗೇಟು : ಸ್ಕೂಟಿ ಹಾಗೂ ಕಾರು ನಡುವೆ ಅಪಘಾತ

0

ಹಳೆಗೇಟು ಪೆಟ್ರೋಲ್ ಬಂಕ್ ಬಳಿ ಸ್ಕೂಟಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.

ಸ್ಕೂಟಿ ಸವಾರರು ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ವಿದ್ಯಾರ್ಥಿಗಳಾಗಿದ್ದು ಪೈಚಾರು ಕಡೆಯಿಂದ ಸುಳ್ಯಕ್ಕೆ ಬರುತಿದ್ದು ಕಾರು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತಿದ್ದು ಹಳೆಗೇಟು ತಿರುವು ಬಳಿ ಈ ಘಟನೆ ಸಂಭವಿಸಿದೆ.


ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರರು ರಸ್ತೆಗೆ ಬಿದ್ದಿದ್ದು ತಲೆ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಇನ್ನು ತಿಳಿಯ ಬೇಕಾಗಿದೆ.