ಗಾನವ್ ಕ್ರಿಕೆಟರ್ಸ್ ಪ್ರಥಮ, ಫ್ರೆಂಡ್ಸ್ ಎಲಿಮಲೆ ದ್ವಿತೀಯ

ಚೈತನ್ಯ ಗೆಳೆಯರ ಬಳಗದ ಆಶ್ರಯದಲ್ಲಿ ಶೆಟ್ಟಿಮಜಲು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ
ಮಾ.8ದಂದು ನಡೆಯಿತು.
ಲಿಖಿತ್ ಕರಂಗಲಡ್ಕ ಮತ್ತು ಜಯಚಂದ್ರ ನರ್ಪ ಇವರ ಸಾರಥ್ಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಎಂಟು ಆಟಗಾರರೊಳಗೊಂಡ ಆರು ತಂಡಗಳು ಭಾಗವಹಿಸಿದ್ದವು.
ಚಾಂಪಿಯನ್ ಸ್ಥಾನವನ್ನು ಗಾನವ್ ಕ್ರಿಕೆಟರ್ಸ್ ಅಲಂಕರಿಸಿತು. ಹಾಗೂ ರನ್ನರ್ಸ್ ಆಗಿ ಫ್ರೆಂಡ್ಸ್ ಎಲಿಮಲೆ ತಂಡ ಹೊರಹೊಮ್ಮಿತು.

ಪಂದ್ಯಾಟದಲ್ಲಿ ಉತ್ತಮ ದಾಂಡುಗಾರರಾಗಿ ನಿತಿನ್ ಚೊಕ್ಕಾಡಿ, ಸರಣಿ ಶ್ರೇಷ್ಠ ಹಾಗು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ನಾಗಿ ಧನುಷ್ ಕಾಣಿಯೂರು, ಉತ್ತಮ ಕ್ಷೇತ್ರರಕ್ಷಕ ಗಗನ್ ಎನ್.ಸಿ,ಉತ್ತಮ ಎಸೆತಗಾರನಾಗಿ ಪುನೀತ್ ನರ್ಪ ಅಂಬೆಕಲ್ಲು ಪಡೆದುಕೊಂಡರು.
ಸೋಮಶೇಖರ್ ಕೇವಳ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು. ಅತಿಥಿಗಳಾಗಿ ಆನಂದ ಗೌಡ ಕರಂಗಿಲಡ್ಕ,ಮನಮೋಹನ ಗೌಡ ನರ್ಪ ಅಂಬೆಕಲ್ಲು, ಮಹೇಶ್ ಬಲ್ಕಜೆ, ಶ್ರೀಕಾಂತ್ ಬಳ್ಳಿಗುಂಡಿ ಉಪಸ್ಥಿತರಿದ್ದರು.
ಸಮಾರೋಪದ ಸಭಾಧ್ಯಕ್ಷರಾಗಿ ಹರೀಶ್ ಕಂಜಿಪಿಲಿ,ಅತಿಥಿಗಳಾಗಿ ಜಯಾನಂದ ಪಟ್ಟೆ,ಆನಂದ ಶೆಟ್ಟಿಮಜಲು,ಕಿರಣ್ ಕುಮಾರ್ ಕರಂಗಲಡ್ಕ,ಶೇಸಪ್ಪ ಶೆಟ್ಟಿಮಜಲು ಉಪಸ್ಥಿತರಿದ್ದರು.