ಮಾ.14 ಕ್ಕೆ ನಂದಿ ರಥಯಾತ್ರೆ ಸುಬ್ರಹ್ಮಣ್ಯಕ್ಕೆ

0

ಮಾ.14ರಂದು ನಂದಿ ರಥಯಾತ್ರೆ, ಸುಬ್ರಹ್ಮಣ್ಯಕ್ಕ ಬರಲಿದೆ. ಸಂಜೆ ಗಂಟೆ 4.30 ಕ್ಕೆ ನಂದಿ ರಥ ಪುರ ಪ್ರವೇಶ ಮಾಡಲಿದ್ದು ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಾಶಿ ಕಟ್ಟೆ ಬಳಿ ಸ್ವಾಗತ ಕೋರಿ ಆಶೀರ್ವಚನ ನೀಡಲಿದ್ದಾರೆ. ಅಲ್ಲಿಂದ ಬಳಿಕ ಶೋಭಾಯತ್ರೆ ನಡೆದು ರಥಬೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಬಗ್ಗೆ ಪೂರ್ವಭಾವಿಯಾಗಿ ಸಂಘನಾತ್ಕ ಪೂರ್ವ ಬಾವಿ ಸಭೆ ಮಾ. 11ರಂದು ನಡೆದಿದ್ದು ಸಭೆಯಲ್ಲಿ ಕಿಶೋರ್ ಶಿರಾಡಿ, ಯಜ್ಞೇಶ್ ಆಚಾರ್, ಜಯಪ್ರಕಾಶ ಕೂಜುಗೋಡು, ದಿನೇಶ್ ಸಂಪ್ಯಾಡಿ, ಅಶೋಕ್ ಕುಮಾರ್, ಅಚ್ಯುತ ಗೌಡ, ದುಗ್ಗಪ್ಪ ಅಗ್ರಹಾರ, ವನಜಾ ವಿ ಭಟ್ , ಸುಭಾಷಿಣಿ ಶಿವರಾಂ ಶೋಬಾ ಗಿರಿಧರ್, ಶ್ರೀಕುಮಾರ್ ಮನೋಜ್ ಸುಬ್ರಮಣ್ಯ ಭರತ್ ನೆಕ್ರಾಜೆ, ಸುಧಾಕರ ಶಿರಾಡಿ , ಸಂತೋಷ, ಚಿದಾನಂದ , ರಾಜೇಶ್ ಮುರಳೀಧರ ಉಪಸ್ಥಿತರಿದ್ದರು.