ಎಂಎಸ್‌ಡಬ್ಲೂ ಪದವಿಯಲ್ಲಿ 1ನೇ ರ‍್ಯಾಂಕ್ ಪಡೆದ ಪಂಜದ ವಿದ್ಯಾರ್ಥಿನಿ ಆಯಿಶತುಲ್ ಜಾಫ್ನ

0

ಎಂಎಸ್‌ಡಬ್ಲೂ ಪದವಿಯಲ್ಲಿ 1ನೇ ರ‍್ಯಾಂಕ್ ಪಡೆಯುವ ಮೂಲಕ ಪಂಜದ ಆಯಿಶತುಲ್ ಜಾಫ್ನರವರು ಊರಿಗೆ ಕೀರ್ತಿ ತಂದಿದ್ದಾರೆ.
ಕೊಣಾಜೆ ಮಂಗಳೂರು ಯೂನಿಯುರ್ಸಿಟಿಯ ವಿದ್ಯಾರ್ಥಿನಿಯಾಗಿರುವ ಇವರು 2023-2024ನೇ ಸಾಲಿನಲ್ಲಿ ನಡೆದ ಎಂಎಸ್‌ಡಬ್ಲೂ ಪದವಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಇವರು ಪಂಜ ಕಾಲೇಜು ಬಳಿಯ ನಿವಾಸಿ ಅಬ್ದುಲ್ ಕರೀಂ ಮತ್ತು ಜಾಮೀಲಾ ದಂಪತಿಯ ಪುತ್ರಿ.