ಇಂಜಿನಿಯರಿಂಗ್ ಕಲಿಕೆಗೆ ವಿದ್ಯಾರ್ಥಿ ವೇತನ

0

2025-26ನೇ ಶೈಕ್ಷಣಿಕ ವರ್ಷದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಸೇರ್ಪಡೆಯಾಗುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷ ವಿದ್ಯಾರ್ಥಿವೇತನ ನೀಡಲಾಗುವುದು ಮತ್ತು ಇದಕ್ಕಾಗಿ ಕೆ.ವಿ.ಜಿ. ಸ್ಕಾಲರ್‌ಶಿಪ್ ಪರೀಕ್ಷೆಯನ್ನು ಮಾ. 20ರಿಂದ ಪ್ರಾರಂಭಿಸಲಾಗುವುದು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ) ಕಮಿಟಿ ‘ಬಿ’ ಇದರ ಅಧ್ಯಕ್ಷಡಾ| ರೇಣುಕಾಪ್ರಸಾದ್ ಕೆ.ವಿ. ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದಾರ್ಥಿವೇತನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಆಸ್ಟ್ರೇನ್ ಮೂಲಕ ನಡೆಸಲಾಗುವ ಕೆ.ವಿ.ಜಿ. ಸ್ಕಾಲರ್‌ಶಿಪ್ ಪರೀಕ್ಷೆಯ ಅಂಕ, ಟ್ರಸ್ಟ್ ಸ್ಕೋರ್ (ಏ.ಐ. ಆಧಾರಿತ ಪರೀಕ್ಷಾ ಪ್ರಾಮಾಣಿಕತೆಯ ಸೂಚ್ಯಂಕ), ಪೋಷಕರ ವಾರ್ಷಿಕ ಆದಾಯ ಮತ್ತು ಗ್ರಾಮೀಣ ವ್ಯಾಸಂಗ (ಇದ್ದಲ್ಲಿ ಗಳನ್ನು ಪರಿಗಣಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿನ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ರೂಪದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಪರೀಕ್ಷಾಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಉಚಿತ ಸಿ.ಇ.ಟಿ. ಮಾದರಿಯ ಅಣುಕು ಪರೀಕ್ಷೆ: ಕಾಲೇಜಿನ ವತಿಯಿಂದ ಕಳೆದ ಜನವರಿ ತಿಂಗಳಿನಿಂದಲೇ ಉಚಿತವಾಗಿ ಪ್ರತಿವಾರ ಸಿ.ಇ.ಟಿ. ಮಾದರಿಯ ಅಣುಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರತಿವಾರದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಗುತ್ತಿದೆ. ಈಗಾಗಲೇ ಸುಮಾರು 1200 ವಿದ್ಯಾರ್ಥಿಗಳು ಈ ಅಣುಕು ಪರೀಕ್ಷೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ವಿದ್ಯಾರ್ಥಿವೇತನ ಪರೀಕ್ಷೆಗೆ ನೋಂದಣಿ: ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಮತ್ತು ಪ್ರಾಂಶುಪಾಲ ಡಾ. ಸುರೇಶ ವಿ. ಮಾರ್ಗದರ್ಶನದಲ್ಲಿ ಮಾ. 20ರಂದು ಪ್ರಾರಂಭವಾಗುವ ಕೆ.ವಿ.ಜಿ. ಸ್ಕಾಲರ್‌ಶಿಪ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ದಿನ, ಯಾವುದೇ ಸಮಯದಲ್ಲಿ ತಮಗೆ ಒಂದು ಗಂಟೆ ಸಮಯಾವಕಾಶವಿರುವಾಗ ಪೆನ್ನು ಮತ್ತು ಪೇಪರ್ ಸಿದ್ಧಪಡಿಸಿಕೊಂಡು ಮೊಬೈಲ್ ಅಥವಾ ಲ್ಯಾಪ್ಟಾಪ್ ಮುಖಾಂತರ ಉತ್ತರಿಸಬಹುದು. ಈಗಾಗಲೇ ಅಣುಕು ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ನೇರವಾಗಿ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಬರೆಯಬಹುದು ಮತ್ತು ಉಳಿದವರು https://kvgcommitteeb.org/kvgce/scholarship ನೋಂದಾಯಿಸಿಕೊಳ್ಳಬಹುದು. ತಮ್ಮ ಹೆಸರನ್ನು

ಕ್ಯಾಂಪಸ್‌ ಪ್ಲೇಸ್‌ಮೆಂಟ್: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗವು ಪ್ರೊ. ಪ್ರಶಾಂತ್ ಕೆ. ಯವರ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಅಂತಿಮ ವರ್ಷದ 84% ವಿದ್ಯಾರ್ಥಿಗಳು ಈಗಾಗಲೇ ವಿವಿಧ ಕಂಪೆನಿಗಳಿಗೆ ಆಯ್ಕೆಗೊಂಡಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹಲವಾರು ಕಂಪೆನಿಗಳು ಕಾಲೇಜಿಗೆ ಭೇಟಿ ನೀಡಲಿವೆ.