ಪ್ರಾಥಮಿಕ ಆರೋಗ್ಯ ಕೇಂದ್ರ, ಮಿತ್ತೋಡಿ ಸೇತುವೆ, ಅರಣ್ಯ ಹಕ್ಕು ಬಗ್ಗೆ ಗಂಭೀರ ಚರ್ಚೆ

ಕೊಲ್ಲಮೊಗ್ರು ಗ್ರಾಮ ಸಭೆ ಮಾ.15 ರಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಮೋಹಿನಿ ಕಟ್ಟ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಮಾದವ ಚಾಂತಾಳ, ಸದಸ್ಯರಾದ ಪುಷ್ಪರಾಜ್ ಪಡ್ಪು, ಅಶ್ವಥ್ ಯಲದಾಳು, ಬಾಲಸುಬ್ರಹ್ಮಣ್ಯ ಭಟ್, ಜಯಶ್ರೀ ಚಾಂತಾಳ, ಶಿವಮ್ಮ ಕಟ್ಟಮೈಲ, ಶುಭಲತಾ ಇದ್ದರು. ನೊಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಪಿಡಿಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೋಹನ್ ವಂದಿಸಿದರು.

ಮೆಸ್ಕಾಂ ನ ಚಿದಾನಂದ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಕಂದಾಯ ಇಲಾಖೆಯ ಮಧು ಕೆ.ಬಿ, ಇಂಜಿನಿಯರ್ ಮಣಿಕಂಠ, ಪಶುವೈದ್ಯರಾದ ಡಾ ವೆಂಕಟಾಚಲಪತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಕುಲದೀಪ್, ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖಾಧಿಕಾರಿ, ಅರಣ್ಯ ಇಲಾಖೆಯ ಸದಾಶಿವ ಸಿಂದಿಗಾರ್ ಇಲಾಖಾ ಮಾಹಿತಿ ನೀಡಿದರು.