ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

0

ಇಂದು ಮೆಗ್ಯ ನೇಮ, ನಾಯರ್ ದೈವ,ಪುರುಷ ದೈವ ಮತ್ತು ಉಪದೈವಗಳ ಕೋಲ

ಐವರ್ನಾಡು ಗ್ರಾಮದ ಪೇರಡ್ಕ – ಮಾಡ ಎಡಮಲೆ ಇರ್ವೆರ್ ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮಾ.18 ಮತ್ತು ಮಾ.19 ರಂದು ಭಕ್ತಿ,ಸಂಭ್ರಮದಿಂದ ನಡೆಯುತ್ತಿದೆ.
ಮಾ.12.00 ರಂದು ಮುಹೂರ್ತದ ಗೊನೆ ಕಡಿಯಲಾಯಿತು.
ಮಾ.18 ರಂದು ಬೆಳಿಗ್ಗೆ ಸ್ಥಳ ಶುದ್ಧಿ,ಆಯುಧ ಶುದ್ಧಿ,ತಂಬಿಲ ಸೇವೆ ನಡೆಯಿತು.


ಸಂಜೆ ನೂಜಾಲು ಮಾಳ್ಯದಿಂದ ಭಂಡಾರ ತೆಗೆಯಲಾಯಿತು.ರಾತ್ರಿ ಗಂಟೆ 11.30 ಕ್ಕೆ ಮುಡಿಯಾಗಿ ಪಲಯ ನೇಮ ನಡಾವಳಿ ನಡೆಯಿತು.
ಮಾ.19 ರಂದು ಬೆಳಿಗ್ಗೆ ಮೆಗ್ಯ ನೇಮ ನಡಾವಳಿ ನಡೆಯಿತು.ಬಳಿಕ
ಪ್ರಸಾದ ವಿತರಣೆ,ಬಟ್ಟಲು ಕಾಣಿಕೆ ನಡೆಯಿತು.


ನಂತರ ನಾಯರ್ ದೈವದ ನೇಮ ಮಧ್ಯಾಹ್ನ ಗಂಟೆ 12.30 ಕ್ಕೆ ಪುರುಷ ದೈವದ ನೇಮ ಮತ್ತು ಉಪದೈವಗಳ ಕೋಲ ನಡೆಯಲಿದೆ.
ಗಂಟೆ 1.30 ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.00 ಕ್ಕೆ ದೈವದ ಭಂಡಾರವನ್ನು ನೂಜಾಲು ಮಾಳ್ಯಕ್ಕೆ ಸಾಗಿಸುವುದು.