
ಸುಳ್ಯದ ಬೂಡು ಪರಿಸರದಲ್ಲಿ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಮಾ.15 ಮತ್ತು16ರಂದು ಜರುಗಿದ್ದು, ಮಾ.18ರಂದು ರಾತ್ರಿ ದೈವಗಳ ನೇಮೋತ್ಸವ ನಡೆಯಿತು.

ಮಾ.18ರಂದು ರಾತ್ರಿ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವದ ನೇಮೋತ್ಸವ ಜತೆಯಾಗಿ ನಡೆಯಿತು. ನೂರಾರು ಭಕ್ತರು ಸೇರಿ ದೈವದ ನರ್ತನ ಸೇವೆ ಕಣ್ತುಂಬಿಕೊಂಡರು.

ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಕೋಶಾಧಿಕಾರಿ ಶಿವರಾಮ ಕೇರ್ಪಳ, ಆಡಳಿತ ಮೊಕ್ತೇಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು, ಕೋಶಾಧಿಕಾರಿ ಪದ್ಮಪ್ಪ ಬೂಡು ಹಾಗೂ ಪದಾಧಿಕಾರಿಗಳು ಇದ್ದು, ಆಗಮಿಸಿದವರನ್ನು ಸ್ವಾಗತಿಸಿದರು.
ರಾತ್ರಿ ಅನ್ನಸಂತರ್ಪನೆ ನಡೆಯಿತು.
(ಚಿತ್ರ : ನವೀನ್ ಗೋಪಾಲ್ ಸ್ಟುಡಿಯೋ ಸುಳ್ಯ)
