ಯುವತಿಯ ಮನೆಯವರಿಂದ ಆಕ್ಷೇಪ – ದೂರು
ಯುವಕ ಹಾಗೂ ಯುವತಿ ಪ್ರೀತಿಸಿ ಮದುವೆಯಾಗಿದ್ದು, ಈ ಮದುವೆಗೆ ಯುವತಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಎಣ್ಮೂರಿನಿಂದ ವರದಿಯಾಗಿದೆ.
ಎಣ್ಮೂರಿನ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಮಾ. ೧೮ರಂದು ರಿಜಿಸ್ಟರ್ ವಿವಾಹವಾದರು. ಈ ಮದುವೆಗೆ ಯುವತಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ.
ಮಾರ್ಚ್ ೧೯ ರಂದು ಸುಳ್ಯದ ವಕೀಲರ ಕಚೇರಿಗೆ ಬಂದ ಸಮಯದಲ್ಲಿ ಯುವತಿಯ ಮನೆಯವರಿಗೆ ವಿಷಯ ತಿಳಿದು ಅವರು ಸುಳ್ಯಕ್ಕೆ ಬಂದು ಅಲ್ಲಿ ವಿಚಾರಿಸಲು ಮುಂದಾದರು.
ಈ ವೇಳೆ ಭಯಗೊಂಡ ಯುವಕ ಹಾಗೂ ಯುವತಿ ಸುಳ್ಯ ಪೊಲೀಸ್ ಠಾಣೆಗೆ ಹೋಗಿದ್ದು, ಅಲ್ಲಿ ಎಸ್ ಐ ಸಂತೋಷ್ ರವರು ಅವರನ್ನು ವಿಚಾರಿಸಿ ಬಳಿಕ ಅವರನ್ನು ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.