ಪಂದ್ಯಾಟದ ಉಳಿಕೆ ಮೊತ್ತ ಅಂಗನವಾಡಿಗೆ ದೇಣಿಗೆ, ನೀಡಿ ಸಮಾಜ ಮುಖಿ ಕಾರ್ಯ
ಏನೆಕಲ್ಲಿನಲ್ಲಿ ಮಾ.9 ರಂದು ನಡೆದ ಲೀಗ್ ಮಾದರಿಯ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ”ಶಂಖಶ್ರೀ ಟ್ರೋಫಿ” ಕಬಡ್ಡಿ ಪಂದ್ಯಾಟದ ಉಳಿಕೆ ಮೊತ್ತ ಅಂಗನವಾಡಿ ಗೆ ದೇಣಿಗೆ, ನೀಡಿ ಸಮಾಜ ಮುಖಿ ಕಾರ್ಯ ಮಾಡಿದ ಘಟನೆ ವರದಿಯಾಗಿದೆ.
ಏನೆಕಲ್ಲು ಅರ್ಪಣಾ ಕ್ರೀಡಾಂಗಣದಲ್ಲಿ ರೈತ ಯುವಕ ಮಂಡಲ ಏನೆಕಲ್ಲು ಸಹಯೋಗದೊಂದಿಗೆ ಪರಮಲೆ ಸಹೋದರರು ಇವರ ಆಶ್ರಯದಲ್ಲಿ ಪಂದ್ಯಾಟ ಜರುಗಿತ್ತು.
ಈ ಪಂದ್ಯಾಟದ ಲೆಕ್ಕಾಚಾರ ಮಾಡಲಾಗಿದ್ದು ಉಳಿಕೆಯಾದ ಮೊತ್ತ ₹ 20,170 ನ್ನು ಪಂದ್ಯಾಟದ ಆಯೋಜಕರುಗಳಾದ ಜೀವಿತ್ ಪರಮಲೆ ಮತ್ತು
ಆಕಾಶ್ ಪರಮಲೆ ಮಾ.19 ರಂದು ಏನೆಕಲ್ಲು ಅಂಗನವಾಡಿ ಶಾಲಾ ಮಕ್ಕಳ ಹೊರಾಂಗಣದ ಕ್ರೀಡಾ ಉಪಕರಣದ ಖರೀದಿ ಪ್ರಯುಕ್ತ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಜಯರಮೇಶ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡ್ಡಿ ನಿರ್ಣಾಯಕ ಮಂಡಳಿ ಅಧ್ಯಕ್ಷರಾದ ಶಿವರಾಮ ಚಿದ್ಗಲ್, ಶಾಲಾ ಸಹಾಯಕಿ ಶ್ರೀಮತಿ ಕಲ್ಪನಾ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು, ಅಲ್ಲದೆ ಪಂದ್ಯಾಟದ ಯಶಸ್ವಿಯ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಲಾಯಿತು.