ಮಡಿಕೇರಿ: ಕೊಡಗು, ದಕ್ಷಿಣ ಕನ್ನಡ ಗೌಡ ವಧು ವರರ ಸಮಾವೇಶ

0

250ಕ್ಕೂ ಅಧಿಕ ಮಂದಿ ಬಾಗಿ, 90ಕ್ಕೂ ಹೆಚ್ಚು ಆಕಾಂಕ್ಷಿಗಳು ಹೆಸರು ನೋಂದಾವಣಿ

ಕೊಡಗು ಗೌಡ ನಿವೃತ್ತ ನೌಕರ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮುದಾಯ ಸಭಾಂಗಣದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು ವರರ ಸಮಾವೇಶ ಇತ್ತೀಚೆಗೆ ಜರುಗಿತು.

ಕಾರ್ಯಕ್ರಮವನ್ನು ಗೌಡ ಸಮಾಜದ ಹಿರಿಯರು ಹಾಗೂ ಉದ್ಯಮಿ ಅಂಬೆಕಲ್ ಕುಶಾಲಪ್ಪ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲ ಕುಂತಿ ಬೋಪಯ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚೊಕ್ಕಾಡಿ ಏನ ಅಪ್ಪಯ್ಯ ವಹಿಸಿ, ಮಾತನಾಡಿದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ , ಕೊಡಗು ಗೌಡ ನಿವೃತ್ತ ನೌಕರ ಸಂಘದ ಮಾಜಿ ಅಧ್ಯಕ್ಷ ಕೋರನ ವಿಶ್ವನಾಥ್ ಮಾತನಾಡಿದರು.

ವೇದಿಕೆಯಲ್ಲಿ ಕೊಡಗು ಗೌಡ
ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಣ್ಣಯ್ಯ, ಉಪಾಧ್ಯಕ್ಷ ಸೆಟ್ಟಜನ ದೊರೆ ಗಣಪತಿ, ನಿರ್ದೇಶಕರಾದ ದಂಬೆಕೋಡಿ ಆನಂದ ಉಪಸ್ಥರಿದ್ದರು.

ಉಳುವಾರನ ರೋಷನ್ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಕುಯ್ಯಮುಡಿ ಅಶ್ವಿನ್ ಕುಮಾರ್ ವಂದಿಸಿದರು.