ಶಕ್ತಿ ಕಾಲೇಜು ಮಂಗಳೂರು ಇಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತಿದ್ದ ಪ್ರಸೂನ್ ಎನ್ ಪಠೇಲ್ ಕೂಜುಗೋಡು ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದಲ್ಲಿ ೫೬೩ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಇವರು ಐನೆಕಿದು ಗ್ರಾಮದ ಕೂಜುಗೋಡಿನವರಾಗಿದ್ದು, ಗುತ್ತಿಗಾರಿನಲ್ಲಿ ವೈದ್ಯರಾಗಿರುವ ಡಾ. ಉದಯಕುಮಾರ್ ಕೂಜುಗೋಡು ಹಾಗೂ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕಿಯಾಗಿರುವ ಶ್ರೀಮತಿ ವನಿತಾ ಅವರ ಪುತ್ರ. ಕುಮಾರಸ್ವಾಮಿ ವಿದ್ಯಾಲಯದ ಹಳೆ ವಿದ್ಯಾರ್ಥಿ.