ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಜಾತ್ರೋತ್ಸವ

0

ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಜಾತ್ರೋತ್ಸವವು ಎ.8ರಿಂದ ಪ್ರಾರಂಭಗೊಂಡಿದ್ದು, ಎ.21 ರವರೆಗೆ ನಡೆಯಲಿದೆ.
ಎ.13 ರಂದು ರಾತ್ರಿ ಭಂಡಾರ ತೆಗೆಯಲಾಯಿತು. ಎ.14ರಂದು ಮಾಮೂಲು ಪೂಜೆ ಪ್ರಾರಂಭವಾಯಿತು. ಎ.15ರಂದು ಬೆಳಿಗ್ಗೆ ಮುಂಡಿಗೆ ಹಾಕುವುದು, ಎ.16 ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ನಡೆಯಿತು.
ಎ.17ರಂದು ನೇಮ ಸಮಾರಾಧನೆ ಮತ್ತು ರಾತ್ರಿ ವಾಲಸಿರಿ ನಡೆಯಿತು. ಎ.18ರಂದು ಬೆಳಿಗ್ಗೆ ನಾಯರ್ ನೇಮ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಎ.19ರಂದು ರಾತ್ರಿ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಹಾಗೂ ರುದ್ರಚಾಮುಂಡಿ ಮತ್ತು ಪೊಟ್ಟ ದೈವದ ನೇಮ, ಎ.20ರಂದು ರಾತ್ರಿ ದೇವತೆ (ಜಾವತೆ) ದೈವದ ನೇಮ,ಎ.21ರಂದು ಸಂಜೆ ಕಲ್ಲುರ್ಟಿ ಮತ್ತು ಕಲ್ಕುಡ ದೈವಗಳ ನೇಮ ಮತ್ತು ರಾತ್ರಿ ಪಂಜುರ್ಲಿ ದೈವದ ನೇಮ ನಡೆಯಲಿದೆ.