ಶಾಂತಿನಗರ: ಅಪಾಯಕಾರಿ ಸ್ಥಿತಿಯಲ್ಲಿ ವಾಲಿ ನಿಂತಿರುವ ವಿದ್ಯುತ್ ಕಂಬ

0

ಅಪಾಯ ಖಚಿತ

ಶಾಂತಿನಗರ ಶಾಲೆಯ ಬಳಿ ಸುಮಾರು 5 ಕ್ಕೂ ಹೆಚ್ಚು ಮನೆಗಳು ಇರುವ ಪ್ರದೇಶದಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬವೊಂದು ವಾಲಿ ನಿಂತಿದ್ದು ಬೀಳುವ ಸ್ಥಿತಿಯಲ್ಲಿದೆ.

ಅಲ್ಲದೆ ಈ ಪ್ರದೇಶ ಜನನಿಬಿಡ ಪ್ರದೇಶವಾಗಿದ್ದು ಸಣ್ಣ ಪುಟ್ಟ ಮಕ್ಕಳು ಮನೆಯ ಅಂಗಳದಲ್ಲಿ ಸದಾ ಆಟವಾಡುತಿದ್ದು, ಕಂಬದಿಂದ ಹಾದು ಹೋಗಿರುವ ವಿದ್ಯುತ್ ತಂತಿಗಳು ಈ ಮನೆಗಳ ಮೇಲ್ಭಾಗದಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿ ಕಂಡು ಬರುತ್ತಿದೆ.

ಕಂಬ ಎಲ್ಲಾದರೂ ಬಿದ್ದರೆ ಇಲ್ಲಿರುವ ಮನೆಗಳು ಹಾಗೂ ಜೀವಗಳಿಗೂ ಹಾನಿ ಸಂಭವಿಸಲಿದ್ದು ಸ್ಥಳೀಯರು ಈ ಬಗ್ಗೆ ಆತಂಕದಲ್ಲಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.