ಸುಳ್ಯ ಸಮೀಪದ ಪೈಚಾರಿನಲ್ಲಿ ಸ್ಕೂಟಿಗೆ ಓಮ್ನಿ ಡಿಕ್ಕಿಯಾಗಿ, ಓಮ್ನಿ ವಾಹನ ನಿಲ್ಲಿಸದೇ ಮುಂದಕ್ಕೆ ಹೋಗಿರುವ ಘಟನೆ ವರದಿಯಾಗಿದೆ.
ಅಡ್ಕಾರಿನ ಅವಿನಾಶ್ ಎಂಬವರು ಸುಳ್ಯದಿಂದ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ, ಪೈಚಾರಿನಲ್ಲಿ ಓಮ್ನಿ ವಾಹನ ಢಿಕ್ಕಿಯಾಯಿತು. ಪರಿಣಾಮ ಸ್ಕೂಟಿ ಹಾಗೂ ಸವಾರರಿಬ್ಬರೂ ರಸ್ತೆಗೆ ಬಿದ್ದರು. ಸ್ಕೂಟಿಯ ಹಿಂಬದಿ ಸವಾರನಿಗೆ ಸಣ್ಣ ಗಾಯವಾಗಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿದೆ. ಓಮ್ನಿ ವಾಹನ ನಿಲ್ಲಿಸದೇ ಪರಾರಿಯಾಗಿದೆ. ಈ ಕುರಿತು ಪೋಲೀಸರಿಗೆ ಮಾಹಿತಿ ನೀಡಲಾಗಿದ್ದು, ಸಿಸಿ ಕ್ಯಾಮರಾ ಚಕ್ ಮಾಡಿದ ಬಳಿಕವಷ್ಟೆ ಓಮ್ನಿಯ ಬಗ್ಗೆ ತಿಳಿದು ಬರಬೇಕಾಗಿದೆ.