ಪಂಜ: ಈಜು ತರಬೇತಿ ಶಿಬಿರ ಉದ್ಘಾಟನೆ

0

ಜೇಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಸೇವೆ ಶ್ಲಾಘನೀಯ-ಪಿ ಜಿ ಆರ್ ಸಿಂಧ್ಯಾ

ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಇದರ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರಮಟ್ಟದ ಈಜು ತರಬೇತುದಾರರಿಂದ ಈಜು ತರಬೇತಿ ಶಿಬಿರ ಎ. 21 ರಂದು ಏನೆಕಲ್ಲು ಹೊಳೆ ಮರಕತ ರಸ್ತೆ ಬಳಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ Jc HGF ವಾಚಣ್ಣ ಕೆರೆಮೂಲೆ ವಹಿಸಿದ್ದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ರಾಜ್ಯ ಮುಖ್ಯ ಆಯುಕ್ತ ಟಿ.ಜಿ.ಆರ್.ಸಿಂಧ್ಯಾ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ “ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈಜು ತರಬೇತಿ ಶಿಬಿರವನ್ನು ಆಯೋಜಿಸಿದ ಜೇಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಸೇವೆ ಶ್ಲಾಘನೀಯ.ನೈಸರ್ಗಿಕವಾಗಿ ನದಿಯಲ್ಲಿ ಈಜುವುದು ಖುಷಿ ನೀಡಿದೆ ಎಂದರು.

ವೇದಿಕೆಯಲ್ಲಿ ಅತಿಥಿಗಳಾಗಿ ವಲಯ 15 ರ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ JFD ಕಾಶೀನಾಥ್ ಗೋಗಟೆ , ಜಿಲ್ಲಾ ಗೈಡ್ಸ್ ಆಯುಕ್ತರು ವಿಮಲ ರಂಗಯ್ಯ , ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ,ತರಬೇತುದಾರರಾದ ಅಂತಾರಾಷ್ಟ್ರೀಯ ಈಜು ತರಬೇತುದಾರ ಯಶವಂತ ಬಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು . ಸ್ಕಾಲರ್ ಶಿಪ್ ಮತ್ತು ವಾಯ್ಸ್ ಆಫ್ ಯೂತ್ ವಲಯ 15 ಇದರ ವಲಯ ಸಂಯೋಜಕ JFD ಲೋಕೇಶ್ ಆಕ್ರಿಕಟ್ಟೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ JFM ದೇವಿ ಪ್ರಸಾದ್ ಜಾಕೆ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಅಧ್ಯಕ್ಷ ಬಿ.ಕೆ.ಮಾಧವ , ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್.ಬಾಳಿಲ , ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೇಸಿ ಅಶ್ವಥ್ ಬಾಬ್ಲುಬೆಟ್ಟು. ಕಾರ್ಯಕ್ರಮ ನಿರ್ದೇಶಕ ಜೇಸಿ ಗಗನ್ ತೆಂಕಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೇಸಿ ಪ್ರವೀಣ್ ಕುಂಜತ್ತಾಡಿ ವೇದಿಕೆಗೆ ಆಹ್ವಾನಿಸಿದರು. ಜೇಸಿ ಗಗನ್ ತೆಂಕಪಾಡಿ ಜೇಸಿ ವಾಣಿ ವಾಚಿಸಿದರು. ಜೇಸಿ ಕಿರಣ್ ಕಂರ್ಬುನೆಕ್ಕಿಲ, ವಿಜೇತ್ ಹಿರಿಯಡ್ಕ ಅತಿಥಿಗಳ ಪರಿಚಾಯಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್.ಬಾಳಿಲ ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು, ಸದಸ್ಯರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಪದಾಧಿಕಾರಿಗಳು ಶಿಬಿರಾರ್ಥಿ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.