ಕಾರುಗಳು ಪರಸ್ಪರ ಡಿಕ್ಕಿಯಾದ ಘಟನೆ ಅರಂತೋಡಿನಲ್ಲಿ ಸಂಭವಿಸಿದೆ.
ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಮಾರುತಿ ೮೦೦ ಕಾರು ಮತ್ತು ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಹೆಚ್ ಪಿ ಗ್ಯಾಸ್ ಕಚೇರಿ ಕಡೆಗೆ ತಿರುಗಿಸಿದಾಗ ಕಾರು ಅರಂತೋಡು ಮುಖ್ಯ ಪೇಟೆಯಲ್ಲಿ ಡಿಕ್ಕಿ ಹೊಡೆಯಿತು.
.ಕಾರಿನ ಮುಂಭಾಗ ಜಖಂ ಆಗಿದ್ದು ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಿದರು.

