ಕುರುಂಜಿಭಾಗ್‌ನಲ್ಲಿ ಮನೆಯ ಕಿಟಕಿಯ ಸನ್‌ಶೇಡ್ ಮೇಲೆ ತ್ಯಾಜ್ಯ ಎಸೆತ

0

ಸಿಸಿ ಟಿವಿ ಮೂಲಕ ವ್ಯಕ್ತಿಯ ಪತ್ತೆ – ಪೊಲೀಸ್ ದೂರು

ಸುಳ್ಯದ ಕುರುಂಜಿಭಾಗ್ ಬಳಿ ಮನೆಯ ಮುಂಭಾಗದ ಕಿಟಕಿಯ ಸನ್‌ಶೇಡ್ ಮೇಲೆ ಅಪರಿಚಿತ ವ್ಯಕ್ತಿಯೋರ್ವ ತ್ಯಾಜ್ಯವನ್ನು ಎಸೆದು ಅಲ್ಲಿ ದುರ್ವಾಸನೆ ಬೀರುವಂತೆ ಮಾಡುತ್ತಿದ್ದು, ಮನೆಯವರು ಆ ವ್ಯಕ್ತಿಯನ್ನು ಸಿಸಿ ಟಿವಿ ಫೂಟೇಜ್ ಮೂಲಕ ಪತ್ತೆ ಹಚ್ಚಿ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ.

ಕುರುಂಜಿಭಾಗ್‌ನಲ್ಲಿ ನೀರಿನ ಪೈಪ್ ಕಾಮಗಾರಿ ನಡೆಸುವ ಕಾರ್ಮಿಕರಲ್ಲಿ ಓರ್ವ ವ್ಯಕ್ತಿ ಈ ಕೃತ್ಯ ಮಾಡುವ ದೃಶ್ಯ ಸಿ ಸಿ ಟಿ ವಿಯಲ್ಲಿ ಪತ್ತೆಯಾಗಿದ್ದು, ಈತನ ಮೇಲೆ ಕ್ರಮ ಕೈಗೊಳ್ಳುವಂತೆ ಮನೆಯವರು ಸುಳ್ಯ ನಗರ ಪಂಚಾಯತಿಗೂ ಹಾಗೂ ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದರೆ ದೂರು ನೀಡಿ ಸಿಸಿಟಿವಿ ಫೂಟೇಜನ್ನು ಸಾಕ್ಷಿ ಸಮೇತವಾಗಿ ನೀಡಿದರೂ ಇದುವರೆಗೆ ನಗರ ಪಂಚಾಯತ್ ವತಿಯಿಂದ ಯಾವುದೇ ಕ್ರಮ ವಹಿಸಲಿಲ್ಲ ಎಂದು ಮನೆಯವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಕ್ರಮ ಕೈಗೊಂಡು ಈ ರೀತಿಯ ದುಷ್ಕೃತ್ಯ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನೆಯವರು ಆಗ್ರಹಿಸಿದ್ದಾರೆ.