ಗೊನೆ ಮುಹೂರ್ತ
ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಉತ್ಸವವು ಮೇ.1ರಿಂದ ಆರಂಭಗೊಂಡು ಮೇ.5ರ ವರೆಗೆ ನಡೆಯುವುದು.
ಈ ಉತ್ಸವದ ಗೊನೆ ಮುಹೂರ್ತ ಎ.25ರಂದು ಮುಂಜಾನೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಗೌಡ ಎನ್.ಎಸ್. ನಡುಬೆಟ್ಟು, ಪ್ರಧಾನ ಅರ್ಚಕರಾದ ಸುಭಾಶ್ ರೈ, ಹಿರಿಯರಾದ ಪುಟ್ಟಣ್ಣ ಗೌಡ ಹುಲಿಮನೆ, ಗಂಗಾಧರ ಗೌಡ ಮಾರಡ್ಕ, ರಾಧಾಕೃಷ್ಣ ದೋಳ್ತಿಲ, ಹೊನ್ನಪ್ಪ ಗೌಡ ಹುಲಿಮನೆ, ಭಾಸ್ಕರ ಗೌಡ ಮುಂಗುಲಿಮನೆ, ಜಗದೀಶ್ ಹುಲಿಮನೆ, ವೆಂಕಟೇಶ ನಡುಬೆಟ್ಟು, ವಿನಯಚಂದ್ರ ನಡುಬೆಟ್ಟು, ಸುದೀಪ್ ರೈ, ಸತೀಶ್ ಕೊಮ್ಮೆಮನೆ, ಹವ್ಯಾಸ್ ಗೌಡ ನಡುಬೆಟ್ಟು, ಯಶಸ್ ಹುಲಿಮನೆ, ಸುಹಾನ್ ಕೊಮ್ಮೆಮನೆ ಮೊದಲಾದವರಿದ್ದರು.