ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ 25ನೇ ವರ್ಷದ ರಜತ ಸಂಭ್ರಮದ ಪ್ರಯುಕ್ತ ಹರಿಹರ ಕೊಲ್ಲಮೊಗ್ರು ವಲಯದ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಏ.22ರಂದು ಹರಿಹರ ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಮನೋಜ್ ಕುಮಾರ್ ನೆರವೇರಿಸಿದರು.

ಹರಿಹರ ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ, ಸುಳ್ಯತಾಲೂಕು ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ದು, ವಲಯ ಪ್ರೇರಕಿ ಚಂದ್ರಕಲಾ ಮತ್ತು ನವೋದಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.