ಮನೆ ಕಿಟಕಿಯ ಸನ್‌ಶೇಡ್‌ಗೆ ತ್ಯಾಜ್ಯ ಬಿಸಾಡಿದ್ದ ವ್ಯಕ್ತಿ ಪತ್ತೆ- ದಂಡ ವಿಧಿಸಿದ ಸುಳ್ಯ ಪೊಲೀಸರು

0

ಸುಳ್ಯ ಕುರುಂಜಿಭಾಗ್ ಬಳಿ ಮನೆಯೊಂದರ ಮುಂಭಾಗದ ಕಿಟಕಿಯ ಸನ್‌ಶೇಡ್‌ಗೆ ಮೇಲೆ ಅಪರಿಚಿತ ವ್ಯಕ್ತಿಯೋರ್ವ ತ್ಯಾಜ್ಯವನ್ನು ಎಸೆದ ಘಟನೆ ಬಗ್ಗೆ ಮನೆಯವರು ನೀಡಿದ ದೂರಿನ ಹಿನ್ನಲೆ ಸುಳ್ಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆತನಿಗೆ ಒಂದು ಸಾವಿರ ರೂ. ದಂಡವನ್ನು ವಿಧಿಸಿ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.


ತ್ಯಾಜ್ಯ ಎಸೆದಿದ್ದ ವ್ಯಕ್ತಿ ಉತ್ತರ ಕರ್ನಾಟಕ ಭಾಗದ ಮುಂಡರಗಿ ನಿವಾಸಿ ಮಂಜುನಾಥ್ ಎಂದು ತಿಳಿದು ಬಂದಿದೆ.


ಮನೆಯವರು ಆತ ತ್ಯಾಜ್ಯವನ್ನು ಬಿಸಾಕಿ ಹೋಗುತ್ತಿದ್ದ ದೃಶ್ಯವನ್ನು ಸಿಸಿ ಟಿವಿ ಫೂಟೇಜ್ ಮೂಲಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.