ಪೈಚಾರ್ ಪೆಟ್ರೋಲ್ ಪಂಪ್ ಬಳಿ ಮುಖ್ಯ ರಸ್ತೆಯಲ್ಲಿ ಲಾರಿ ಮತ್ತು ಪಿಕಪ್ ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಎ. 25 ರಂದು ರಾತ್ರಿ ಸಂಭವಿಸಿದೆ.
ಪೈಚಾರು ಪೆಟ್ರೋಲ್ ಪಂಪ್ ನಿಂದ ಲಾರಿ ಡೀಸೆಲ್ ತುಂಬಿಸಿ ರಸ್ತೆಗೆ ಬರುತಿದ್ದ ವೇಳೆ ಮೈಸೂರು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ಪರಸ್ಪರ ಡಿಕ್ಕಿ ಉಂಟಾಗಿದೆ. ಪಿಕಪ್‌ನಲ್ಲಿ ಮಾವಿನ ಕಾಯಿ ತುಂಬಿದ್ದು ಇದು ಮಂಗಳೂರು ಕಡೆಗೆ ಹೋಗುತ್ತಿತ್ತು. ಘಟನೆಯಿಂದ ಎರಡೂ ವಾಹನಗಳು ಜಖಂಗೊಂಡಿದ್ದು, ಚಾಲಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.