ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಶು ಆಸ್ಪತ್ರೆ ಸುಳ್ಯದಲ್ಲಿ ಚಿಕಿತ್ಸಾ ಸಮಯದ ಬದಲಾವಣೆ

0

ಸುಳ್ಯ ತಾಲೂಕಿನಾದ್ಯಂತ ದಿನಾಂಕ 26.04.2025 ರಿಂದ 10.06.2025 ರವರೆಗೆ ಸುಮಾರು 45 ದಿನಗಳ ಕಾಲ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಾಗೂ ಚರ್ಮಗಂಟು ರೋಗದ ಲಸಿಕಾ ಕಾರ್ಯಕ್ರಮ ನಡೆಯಲಿರುವುದರಿಂದ ತಾಲೂಕಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ಪಶು ಆಸ್ಪತ್ರೆ ಸುಳ್ಯದಲ್ಲಿ ನಾಯಿ ಬೆಕ್ಕು ಮತ್ತು ಇತರ ಸಾಕು ಪ್ರಾಣಿಗಳ ದೈನಂದಿನ ಚಿಕಿತ್ಸಾ ಸೇವೆಯನ್ನು ಮಧ್ಯಾಹ್ನ 02.00 ರಿಂದ 4.00 ಗಂಟೆಯ ಒಳಗೆ ಮಾತ್ರ ನಿಗಧಿಪಡಿಸಲಾಗಿದೆ

ಈ ಅವಧಿಯಲ್ಲಿ ಹಸು ಎಮ್ಮೆ ಗಳ ತುರ್ತು ಚಿಕಿತ್ಸೆಗಾಗಿ ಇಲಾಖೆಯ ಬಸು ಸಂಜೀವಿನಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1962 ನ್ನು ಸಂಪರ್ಕಿಸಬಹುದಾಗಿದೆ ಎಂದು
ಸುಳ್ಯ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ
ಮುಖ್ಯ ಪಶುವೈದ್ಯಾಧಿಕಾರಿ ಯವರು ತಿಳಿಸಿದ್ದಾರೆ.