ಐವರ್ನಾಡಿನ ಮುಖ್ಯ ರಸ್ತೆ ಪೆಟ್ರೋಲ್ ಪಂಪು ಹತ್ತಿರ ಕ್ಲೌಡ್ ವಿಡ್ಜೌ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಎ.26 ರಂದು ಶುಭಾರಂಭಗೊಂಡಿತು.
ರಾಜೇಶ್ ನಾಥ್ ಜಿಯವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕ ಎಸ್.ಎನ್.ಮನ್ಮಥ,ಇಂಜಿನಿಯರ್ ಆರೀಫ್ ಬೆಳ್ಳಾರೆ, ಐವರ್ನಾಡಿನ ಪೆಟ್ರೋಲ್ ಪಂಪ್ ಮಾಲಕ ಶ್ರೀನಿವಾಸ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಜಯಂತ ಮಡಪ್ಪಾಡಿ ಮತ್ತು ಶಾಂತಾರಾಮ ಕಣಿಲೆಗುಂಡಿ ಸ್ವಾಗತಿಸಿದರು.