Home Uncategorized ಸುಬ್ರಹ್ಮಣ್ಯ : ವೃದ್ದ ನಾಪತ್ತೆ

ಸುಬ್ರಹ್ಮಣ್ಯ : ವೃದ್ದ ನಾಪತ್ತೆ

0

ಪತ್ತೆಗಾಗಿ ಪೊಲೀಸ್ ದೂರು : ಸಾವಿಗೀಡಾಗಿರುವ ಶಂಕೆ

ಸುಬ್ರಹ್ಮಣ್ಯದಲ್ಲಿ ಕೆಲ ತಿಂಗಳಿನಿಂದ ಹೊಟೇಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ವೃದ್ದ ಕಾಣೆಯಾಗಿರುವುದಾಗಿ ಪೊಲೀಸ್ ದೂರು ದಾಖಲಾಗಿದ್ದು, ನಾಲ್ಕೂರಿನ ಮನೆಯೊಂದರಲ್ಲಿ ಮೃತಪಟ್ಟಿರುವುದಾಗಿ ವದಂತಿ ಹಬ್ಬಿದೆ.

ಈ ವೃದ್ದ ಸುಬ್ರಹ್ಮಣ್ಯದಲ್ಲಿ ಹಲವು ಹೊಟೇಲ್‌ಗಳಲ್ಲಿ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದು ಆಗ ಪರಿಚಯವಾದ ನಾಲ್ಕೂರಿನ ಮನೆಯವರೊಬ್ಬರಿಗೆ ಪರಿಚಯವಾಗಿ ಆ ಮನೆಗೂ ಬರಲಾರಂಭಿಸಿದ್ದರೆನ್ನಲಾಗಿದೆ. ಬಳಿಕ ಆ ಮನೆಯಲ್ಲಿ ಅವರು ತಣಗುತ್ತಿದ್ದು, ಅವರು ಅಲ್ಲಿ ಮೃತಪಟ್ಟಿರಬಹುದು. ಬಳಿಕ ಅವರನ್ನು ಅಲ್ಲಿಯೇ ದಫನ ಮಾಡಿರಬಹುದೆಂದು ಶಂಕಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

NO COMMENTS

error: Content is protected !!
Breaking