Home Uncategorized ಕಲ್ಲುಗುಂಡಿ : ಗಾಳಿ – ಮಳೆಗೆ ಮರ ಬಿದ್ದು ಮನೆಗೆ ಹಾನಿ

ಕಲ್ಲುಗುಂಡಿ : ಗಾಳಿ – ಮಳೆಗೆ ಮರ ಬಿದ್ದು ಮನೆಗೆ ಹಾನಿ

0

ಧರೆಗೆ ಉರುಳಿದ ವಿದ್ಯುತ್ ಕಂಬಗಳು

ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ – ಗಾಳಿಗೆ ಕಲ್ಲುಗುಂಡಿ ದಂಡಿಕಜೆ ಬಳಿ ಮನೆಗೆ ಮರ ಬಿದ್ದು ಹಾನಿ ಹಾಗೂ ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದ ಘಟನೆ ಏ.29 ರಂದು ವರದಿಯಾಗಿದೆ.

ದಂಡೆ ಕಜೆ ನಿವಾಸಿ ಅನಸೂಯ ಅವರ ಮನೆಯ ಹಿಂಬದಿಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಮನೆಯ ಪಕ್ಕದಲ್ಲಿರುವ 4 ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಸಂಪೂರ್ಣ ಹಾನಿಯಾಗಿದೆ.
ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜ, ಗ್ರಾಂ. ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು, ಗ್ರಾಂ. ಪಂ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ ಹನೀಫ್, ಮೆಸ್ಕಾಂ ಸಿಬ್ಬಂದಿ ನವೀನ್ ಉಪಸ್ಥಿತರಿದ್ದರು..

NO COMMENTS

error: Content is protected !!
Breaking