
ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ವತಿಯಿಂದ ಚಿತ್ರಕಲಾ ಕ್ಷೇತ್ರ ಸಾಧನೆಯನ್ನು ಗುರುತಿಸಿ, ದುರ್ಗಾಶ್ರೀ ಡಿ ಅಡ್ಯಡ್ಕ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮೇ 2 ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮ್ಯಾನೇಜರ್ ಪೂಜಿತ್ ಮೊದಲಾದವರು ಉಪಸ್ಥಿತರಿದ್ದರು. ಇವರು ಅಡ್ಯಡ್ಕ-ತೊಡಿಕಾನ ದನೇಂದ್ರನ್ ಪಿ ಮತ್ತು ಯೊಗೀಶ್ವರಿ ಡಿ ದಂಪತಿಗಳ ಪುತ್ರಿ.