ಅರಂತೋಡು ಗ್ರಾಮದ ಕಿರ್ಲಾಯದಲ್ಲಿ ತೆಂಗಿನಕಾಯಿ ತೆಗೆಯಲೆಂದು ಮರಕ್ಕೆ ಹತ್ತಿದ್ದ ವೇಳೆ ಕೆಳಕ್ಕೆ ಬಿದ್ದು ತೀವ್ರ ಜಖಂಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಅಡ್ಕಬಳೆ ವಾಸುದೇವ ಎಂಬವರು ಮೃತಪಟ್ಟ ವ್ಯಕ್ತಿ. ವಾಸುದೇವರವರು ಕಿರ್ಲಾಯದಲ್ಲಿ ತೆಂಗಿನಕಾಯಿ ತೆಗೆಯಲೆಂದು ತೆಂಗಿನ ಮರಕ್ಕೆ ಹತ್ತಿದ್ದರು. ಈ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ಅವರು ಮೃತಪಟ್ಟರು.

ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.