ಮಹೇಶ್ ಕರಿಕ್ಕಳ ವಿರುದ್ಧ ಬಂಡೆದ್ದ ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ
ಬಂಡಾಯ ಸ್ಪರ್ಧೆ ಸಂಭವ ; ಸ್ಥಳದಲ್ಲಿ ಕುತೂಹಲ
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಸರಕಾರ ನೇಮಕಗೊಳಿಸಿದ್ದು ಇಂದು ಅಧಿಕೃತವಾಗಿ ಪದಗ್ರಹಣ ನಡೆಸಲು ನಿರ್ಧರಿಸಿ ಮಹೇಶ್ ಕುಮಾರ್ ಕರಿಕ್ಕಳರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆರಿಸಬೇಕೆಂದು ನಿನ್ನೆ ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖ ನಿರ್ಧಾರವಾಗಿದ್ದರೂ, ಇಂದು ಬಂಡಾಯದ ಸೂಚನೆ ಕಂಡುಬಂದಿದೆ.
ಮಹೇಶ್ ಕುಮಾರ್ ವಿರುದ್ಧ ಅಶೋಕ್ ನೆಕ್ರಾಜೆ ಹಾಗೂ ಹರೀಶ್ ಇಂಜಾಡಿ ಬಂಡೆದಿದ್ದಾರೆಂಬ ಮಾಹಿತಿ ಬಂದಿದೆ. ಅವರಲ್ಲೊಬ್ಬರು ಮಹೇಶರ ಎದುರಾಗಿ ನಾಮಪತ್ರ ಸಲ್ಲಿಸುವ ಸಂಭವವಿರುವುದಾಗಿ ಹೇಳಲಾಗುತ್ತಿದೆ. ಸದಸ್ಯರಲ್ಲಿ ತಲಾ ನಾಲ್ಕು ಮಂದಿಯಂತೆ ಡಿವೈಡ್ ಆಗಿರುವುದಾಗಿಯೂ, ಪ್ರಧಾನ ಅರ್ಚಕರು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದಾಗಿಯೂ ಹೇಳಲಾಗುತ್ತಿದೆ.

ಸಭೆಯಲ್ಲಿ ಮಹೇಶ್ ಕರಿಕ್ಕಳ, ಡಾ.ರಘು, ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ, ಲೀಲಾ ಮನಮೋಹನ್, ಪ್ರವೀಣ ರೈ, ಸೌಮ್ಯ ಭರತ್, ಅಜಿತ್ ಕುಮಾರ್ , ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ, ಇ.ಒ. ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್ ಉಪಸ್ಥಿತರಿದ್ದಾರೆ.
ಇದೀಗ ಸದಸ್ಯರ ನಡುವೆ ಮುಚ್ಚಿದ ಬಾಗಿಲಿನೊಳಗೆ ಮಾತುಕತೆ ನಡೆಯುತ್ತಿದೆ.