Home ಪ್ರಚಲಿತ ಸುದ್ದಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 (EPL-2025) ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 (EPL-2025) ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ ಮೇ ೧೦ ರಂದು ಕೆ.ವಿ.ಜಿ. ಆಟದ ಮೈದಾನದಲ್ಲಿ ನಡೆಯಿತು. ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರಿಕೆಟ್ ಅಂದರೆ ಅದು ಕೇವಲ ಒಂದು ಆಟವಲ್ಲ, ಇದು ನಮಗೆ ತಾಳ್ಮೆ, ಸಂಘಟನೆ ಮತ್ತು ನಿರಂತರತೆಯ ಮಹತ್ವವನ್ನು ಕಲಿಸುತ್ತದೆ ಎಂದು ಹೇಳಿ, ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳ ಪೂರಕವಾದ ಕ್ರೀಡೆ ಮತ್ತು ಸಾಂಸ್ಕ್ರತಿಕ ವೇದಿಕೆಯನ್ನು ನೀಡುವಲ್ಲಿ ಶ್ರಮಿಸುವ ಕಾಲೇಜಿನ ಸಿಬ್ಬಂದಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಮುಖ್ಯ ಅತಿಥಿ ವಿ.ಜೆ. ವಿಖ್ಯಾತ್‌ರವರು ಗುತ್ಯಮ್ಮ ದೇವಿಯ ಅನುಗ್ರಹವು ಸಂಸ್ಥೆಯ ಪ್ರತಿಯೊಬ್ಬರ ಮೇಲಿದ್ದು ಅಭಿವೃದ್ಧಿ ಪತದಲ್ಲಿ ಸಾಗುತ್ತಿರುವ ಸಂಸ್ಥೆಯ ಕಾರ್ಯವೈಖರಿ ಮತ್ತು ಸಂಸ್ಥೆಯ ಮುಖ್ಯಸ್ಥರ ದಿಟ್ಟ ನಡೆಯನ್ನು ಶ್ಲಾಘಿಸಿದರು. ಡಾ. ಜ್ಯೋತಿ ಆರ್ ಪ್ರಸಾದ್‌ರವರು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಒಗ್ಗೂಡಿಸಿಕೊಂಡು ಜೀವನದಲ್ಲಿ ಮುಂದುವರೆಯಬೇಕೆಂದು ಹೇಳಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ಉಜ್ವಲ್ ಯು.ಜೆ. ರವರು ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಹೇಳಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ಮಾತನಾಡಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿ ಎಲ್ಲರು ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಿ ಹೊನಲು ಬೆಳಕಿನ ಆಟವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಈ ಕ್ರೀಡಾ ಕೂಟದಲ್ಲಿ ಕಾಲೇಜಿನ ೨೪ ತಂಡಗಳು ಭಾಗವಹಿಸಿದ್ದವು. ಹಾಗೂ ವಿದ್ಯಾರ್ಥಿಗಳ ೨ Flashmob Dance ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು ಜೊತೆಗೆ ಸಿಡಿಮದ್ದು ಪ್ರದರ್ಶನ ನೆರೆದ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದವು. ನಂತರ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು Team MBA RULERS ಹಾಗೂ ದ್ವಿತೀಯ ಸ್ಥಾನವನ್ನು Team CS&E (AI&ML) STRICKERS ತಂಡವು ಪಡೆದುಕೊಂಡಿತು.

ಈ ಕ್ರೀಡಾ ಕೂಟದಲ್ಲಿ ಹಳೆವಿದ್ಯಾರ್ಥಿಗಳ ಒಂದು ತಂಡವು ಭಾಗವಹಿಸಿ ಪ್ರದರ್ಶನ ಪಂದ್ಯವನ್ನು ಆಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ., ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, Civil  HOD ಡಾ. ಚಂದ್ರಶೇಖರ್ ಎ., ಡೀನ್-ಅಡ್ಮಿಶನ್ ಡಾ. ಬಾಲಪ್ರದೀಪ್ ಕೆ.ಎನ್, ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್., CS&E (AI&ML) HOD ಡಾ. ಸವಿತಾ ಸಿ.ಕೆ., ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರಶಾಂತ್ ಕಕ್ಕಾಜೆ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರೊ. ಲೋಕೇಶ್ ಪಿ.ಸಿ, ಕ್ರೀಡಾ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಜೇಶ್ ಕುಮಾರ್ ಎಂ.ಎಸ್., ಪ್ರಶಾಂತ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರುಗಳು ಪಂದ್ಯಾಕೂಟದ ಯಶಸ್ಸಿಗೆ ಸಂಪೂರ್ಣ ಸಹಕರಿಸಿದರು.

NO COMMENTS

error: Content is protected !!
Breaking