ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಗೆ ಒಂದು ಗಂಟೆಯಿಂದ ಮುಚ್ಚಿದ ಬಾಗಿಲ ನಡುವೆ ಸಮಾಲೋಚನೆ ನಡೆಯುತ್ತಿದ್ದರೂ ಇನ್ನೂ ಒಮ್ಮತ ಮೂಡಿಲ್ಲ.
ನಿನ್ನೆ ಮಹೇಶ್ ಕುಮಾರ್ ಕರಿಕ್ಕಳ ಅವರ ಅಧ್ಯಕ್ಷತೆಯನ್ನು ಹೈಕಮಾಂಡ್ ಸೂಚಿಸಿತ್ತು. ಆದರೆ ಇಂದು ಇದಕ್ಕೆ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ ಬಂಡೆದ್ದು ಸ್ಪರ್ಧೆ ನಡೆಸುವ ಸಾಧ್ಯತೆ ಎದುರಾಯಿತು.


ಈ ಹಿನ್ನೆಲೆಯಲ್ಲಿ ನೇಮಕಗೊಂಡ ಸದಸ್ಯರು ಮಾತ್ರ ಇದ್ದು ಸಮಾಲೋಚನೆ ನಡೆಯಿತು. ಇದು ಒಂದುಗಂಟೆಯಾದರೂ ಮುಗಿಯದಿದ್ದಾಗ ಹೊರಗೆ ಕಾಯುತ್ತಿದ್ದ ಶಿವರಾಮ ರೈ, ಬಾಲಕೃಷ್ಣ ಬಳ್ಳೇರಿ , ಡಾ. ದೇವಿಪ್ರಸಾದ್ ಕಾನತ್ತೂರು ಮೊದಲಾದವರು ಒಳಕ್ಕೆ ಹೋಗಿ ಮಾತನಾಡಿದರು. ಈ ವೇಳೆ ಇ.ಒ.ರವರು ಒಳ ಬಂದು ಅವರನ್ನು ಹೊರ ಹೋಗುವಂತೆ ವಿನಂತಿಸಿದರು. ಬಳಿಕ ಮತ್ತೆ ಸಮಾಲೋಚನೆ ಮುಂದುವರಿಯಿತು.
ಈ ಮಧ್ಯೆ ಪಕ್ಷದ ಜಿಲ್ಲಾ ಹೈಕಮಾಂಡ್ ಬಂಡೆದ್ದ ಸದಸ್ಯರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆಂದೂ ಮಾಹಿತಿ ಲಭ್ಯವಾಗಿದೆ. ಅಧಿಕಾರ ಹಂಚಿಕೆ ಸೂತ್ರ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆಂದೂ ತಿಳಿದುಬಂದಿದೆ.