ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿನ್ನೆ ಮಹೇಶ್ ಕುಮಾರ್ ಕರಿಕ್ಕಳ ಅವರ ಅಧ್ಯಕ್ಷತೆಯನ್ನು ಹೈಕಮಾಂಡ್ ಸೂಚಿಸಿತ್ತು. ಆದರೆ ಇಂದು ಇದಕ್ಕೆ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ ಬಂಡೆದ್ದು ಸ್ಪರ್ಧೆ ನಡೆಸುವ ಸಾಧ್ಯತೆ ಎದುರಾಯಿತು.

ಈ ಹಿನ್ನೆಲೆಯಲ್ಲಿ ನೇಮಕಗೊಂಡ ಸದಸ್ಯರು ಮಾತ್ರ ಇದ್ದು ಸಮಾಲೋಚನೆ ನಡೆಯಿತು. ಇದು ಒಂದು ಗಂಟೆಯಾದರೂ ಮುಗಿಯದಿದ್ದಾಗ ಹೊರಗೆ ಕಾಯುತ್ತಿದ್ದ ಕೆಲವರು ಒಳಕ್ಕೆ ಹೋಗಿ ಮಾತನಾಡಿದರು. ಈ ವೇಳೆ ಇ.ಒ.ರವರು ಒಳ ಬಂದು ಅವರನ್ನು ಹೊರ ಹೋಗುವಂತೆ ವಿನಂತಿಸಿದರು. ಬಳಿಕ ಮತ್ತೆ ಸಮಾಲೋಚನೆ ಮುಂದುವರಿಯಿತು.
ಈ ಮಧ್ಯೆ ಪಕ್ಷದ ಜಿಲ್ಲಾ ಹೈಕಮಾಂಡ್ ಬಂಡೆದ್ದ ಸದಸ್ಯರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯ ಮಾಡಿದರೂ ಫಲಕಾರಿಯಾಗಲಿಲ್ಲ.

ಸಭೆಗೆ ಇ.ಒ.ಬಂದ ಬಳಿಕ ಮತ್ತೆ ಸಮಾಲೋಚನೆ ಮುಂದುವರಿಯಿತು. ಆದರೆ ಹರೀಶ್ ಇಂಜಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮನಸ್ಸು ಮಾಡಲಿಲ್ಲವೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಸಭೆಯಿಂದ ಹೊರನಡೆದರು.
ಬಳಿಕ ಚುನಾವಣಾ ಪ್ರಕ್ರಿಯೆ ನಡೆಯಿತು. ಹರೀಶ್ ಇಂಜಾಡಿಯವರ ಹೆಸರನ್ನು ಸೌಮ್ಯ ಸೂಚಿಸಿ ಡಾ. ರಘು ಅನುಮೋದಿಸಿದರೆಂದು ತಿಳಿದುಬಂದಿದೆ.