ಪಂಜ: ಮೂರು ಊರಿನ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಭಕ್ತಿ ಸಡಗರದ ನೇಮೋತ್ಸವ

0

ಪಂಜದ ಕಂರ್ಬು ಪೂಜಾರಿಮನೆ ಎಂಬಲ್ಲಿರುವ ಮೂರು ಊರಿನ ( ಕಂರ್ಬು-ಅಳ್ಪೆ-ಕಂಡೂರು ಕೂಡುಕಟ್ಟು)
ಶ್ರೀ ಶಿರಾಡಿ ರಾಜನ್ ದೈವಸ್ಥಾನ ಜೀರ್ಣೋದ್ಧಾರಗೊಂಡು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು ಮೇ.11 ರಿಂದ ಮೇ.12 ತನಕ
ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ
ಜರುಗಿತು.


ಮೇ.11 ರಂದು ರಾತ್ರಿ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು, ಅನ್ನಸಂತರ್ಪಣೆ, ಪರಿವಾರ ದೈವಗಳ ನೇಮ ನಡೆಯಿತು.
ಮೇ. 12 ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವ ನೇಮೋತ್ಸವ, ಮಧ್ಯಾಹ್ನ :ಕೈ ಕಾಣಿಕೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಘವ ಗೌಡ ಕಾಣಿಕೆ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ ಲಕ್ಷ್ಮಣ ಗೌಡ ಬೊಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕಂಬಳ , ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.