ಮಹೇಶ್ ಕರಿಕ್ಕಳ ಪ್ರತಿಕ್ರಿಯೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಪಕ್ಷದಿಂದ ನನ್ನನ್ನು ಆಯ್ಕೆ ಮಾಡಿದ್ದರೂ ಕೆಲವು ಸದಸ್ಯರು ಪಕ್ಷದ ಆದೇಶದ ವಿರುದ್ಧ ನಿಲ್ಲಲು ಕಾಣದ ಕೈಗಳ ಕೈವಾಡವೇ ಕಾರಣ ಎಂದು ಮಹೇಶ್‌ಕುಮಾರ್ ಕರಿಕ್ಕಳ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮನೆಯಲ್ಲಿ ಎಲ್ಲಾ 8 ಮಂದಿ ಕೂಡಾ ಇದ್ದು ಸಭೆ ನಡೆದಿತ್ತು. ನನ್ನನ್ನು ಅಧ್ಯಕ್ಷನನ್ನಾಗಿ ಮಾಡುವ ನಿರ್ಧಾರ ಸಬೆಯಲ್ಲಿ ಆಗಿತ್ತು. ಆದರೆ ಇಂದು ಬೆಳಿಗ್ಗೆ ನಾವು ದೇವಸ್ಥಾನಕ್ಕೆ ಕಮಿಟಿ ಮೀಟಿಂಗ್‌ಗೆಂದು ಹೋದಾಗ ಕೆಲವು ಸದಸ್ಯರು ಬಂಡಾಯ ಏಳುವ ಲಕ್ಷಣ ಕಂಡುಬಂದಿತ್ತು. ಪಕ್ಷದ ನಿರ್ಧಾರದಂತೆ ಆಗಬೇಕೆಂದು ನಾವು ಪ್ರತಿಪಾದಿಸಿದೆವು. ಆದರೆ ಕಲವು ಸದಸ್ಯರು ಪಕ್ಷದ ನಿರ್ಧಾರದ ವಿರುದ್ಧ ನಿಂತರು. ಈ ಹಿನ್ನಲೆಯಲ್ಲಿ ನಾನು ಸಭೆಯಿಂದ ಹೊರಬಂದೆ. ನಾನು ಅಧ್ಯಕ್ಷನಾಗಬಾರದೆಂದು ಸದಸ್ಯರನ್ನು ಎತ್ತಿ ಕಟ್ಟಿ ಕೈವಾಡ ನಡೆಸಿದ ಕಾಣದ ಕೈಗಳು ಯಾವುದೆಂದು ಎಲ್ಲರಿಗೂ ತಿಳಿದಿದೆ ಎಂದು ಮಹೇಶ್‌ಕುಮಾರ್ ಕರಿಕ್ಕಳ ಹೇಳಿದರು.