ಉಬರಡ್ಕ ಮಿತ್ತೂರು ರಸ್ತೆಯನ್ನು ಆವರಿಸಿ ಅಪಾಯಕ್ಕೆ ಆಹ್ವಾನ ನೀಡುವ ಕಾಡು ಪೊದೆಗಳು

0

ಉಬರಡ್ಕ ಮಿತ್ತೂರು ರಸ್ತೆಯ ತಿರುವಿನಲ್ಲಿ ವಾಹನ ಸವಾರರಿಗೆ ಕಂಟಕವಾಗುವ ರೀತಿಯಲ್ಲಿ ಕಾಡು ಪೊದೆಗಳು ಬೆಳದು ರಸ್ತೆಯ ಮೇಲೆ ಆವರಿಸಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಹಿಂದೆ ಇದೇ ರಸ್ತೆಯ ಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಕೂಟಿ ಅಪಘಾತದಲ್ಲಿ ಮೃತ ಪಟ್ಟಿದ್ದು ವ್ಯಾಪಕ ಸುದ್ದಿಯಾಗಿತ್ತು.
ಇನ್ನಾದರೂ ಮುಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಸಂಬಂಧ ಪಟ್ಟ ಜನಪ್ರತಿನಿಧಿಗಳು ಅಥವಾ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಕಾರ್ಯಪ್ರವೃತ್ತರಾಗುವಂತೆ ಸಾರ್ವಜನಿಕರು ಆಗ್ರಹಿಸಿರುತ್ತಾರೆ.