ದುಬೈ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ -2025 ರೆನ್ಶಿ ಯೋಗ ಸಂಸ್ಥೆ ದುಬೈ, ಯುಎಇ, ಅವಿನಾಶ್ ಯೋಗ ಮತ್ತು ಏರೋಬಿಕ್ಸ್
ಸಂಸ್ಥೆ ಬೆಂಗಳೂರು ಸಹಯೋಗದೊಂದಿಗೆ ಮೇ 9 ರಿಂದ 12ರ ವರೆಗೆ ದುಬೈಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕು. ಅಕ್ಷಯ ಬಾಬ್ಲುಬೆಟ್ಟು (ಏನೇಕಲ್ಲು) ಚಿನ್ನದ ಪದಕ ಗಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲು ಇಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ಷಯ ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆಯಲ್ಲಿ ಯೋಗ ಶಿಕ್ಷಣದ ಮಾರ್ಗದರ್ಶನ ವನ್ನು ಪಡೆಯುತ್ತಿದ್ದಾರೆ. ಏನೆಕಲ್ಲು ನಿವಾಸಿ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿರವರಪುತ್ರಿ