ಮನಸೂರೆಗೊಂಡ ಗಂಗಾ ಶಶಿಧರನ್ ವಯಲಿನ್ ವಾದನ
ಸಂಗೀತಾಸಕ್ತರಿಂದ ತುಂಬಿ ತುಳುಕಿದ ಸಭಾಂಗಣ
ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತೀ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮೇ. 13 ರಂದು ಸಂಜೆ ಖ್ಯಾತ ವಯಲಿನ್ ವಾದಕಿ ಗಂಗಾ ಶಶಿಧರನ್ ಅವರಿಂದ ವಯಲಿನ್ ವಾದನ ನಡೆಯಿತು.

ವಯಲಿನ್ ವಾದಕಿ ಗಂಗಾ ಶಶಿಧರನ್ ಆಲಿಸಲು ಶ್ರೀ ಮದಾನಂದತೀರ್ಥ ತತ್ವ ದರ್ಶಿನಿ ಸಭಾ ಪೂರ್ತೀ ಸಂಗೀತ ಪ್ರೀಯರಿಂದ ತುಂಬಿ ತುಳುಕಿತ್ತು.


ಶ್ರೀ ಮಠದ ಶ್ರೀಗಳಾದ ವಿದ್ಯಾಪ್ರಸನ್ನ ಶ್ರೀಗಳು ಉಪಸ್ಥಿತರಿದ್ದರು. ಶ್ರೀಗಳ ಎದುರು ಗಂಗಾ ಶಶಿಧರನ್ ವಯಲಿನ್ ನುಡಿಸಿ ಆಶೀರ್ವಾದ ಬೇಡಿದರು. ಆಡಳಿತಾಧಿಕಾರಿ ಸುದರ್ಶನ ಜೋಯಿಸ ಆದಿಯಾಗಿ ನೂರಾರು ಜನ ವಯಲಿನ್ ವಾದನ ಆಲಿಸಲು ಉಪಸ್ಥಿತರಿದ್ದರು.